ಹುಬ್ಬಳ್ಳಿ (hubli) ಮತ್ತೊಮ್ಮೆ ಬೆಚ್ಚಿಬಿದ್ದಿದೆ. ನೇಹ (Neha) ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ನಡೆದುಹೋಗಿದೆ. ವಿಪರ್ಯಾಸ ಅಂದ್ರೆ ಈ ಕೊಲೆ ನಡೆದಿರೋದು ಕೂಡ ಯುವತಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕಿರಾತಕನ ಪ್ರೀತಿಯನ್ನ ಒಲ್ಲೆ ಅಂದಿದ್ದಕ್ಕೆ 20 ವರ್ಷದ ಯುವತಿ ಅಂಜಲಿ (Anjali) ಶವವಾಗಿದ್ದಾಳೆ.
ಅಂಜಲಿ ಎಂಬ ಯುವತಿ ಮನೆಗೆ ಬೆಳ್ಳಂ ಬೆಳಗ್ಗೆ ಚಾಕು ಹಿಡಿದು ನುಗ್ಗಿದ ನೀಚ ಗಿರೀಶ್ (Girish), ಆಕೆಯ ‘ಮನೆಯಲ್ಲಿಯೇ ಚಾಕುವಿನಿಂದ ಬರ್ಬರವಾಗಿ ಇರಿದು ಕೊಂದು ಸ್ಥಳದಿಂದ ಎಸ್ಕೆಪ್ ಆಗಿದ್ದಾನೆ. ಅಂಜಲಿ ಎಂಬ ಯುವತಿ ಈ ಗಿರೀಶ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ ತಾನು ಈಕೆಯನ್ನ ಪ್ರೀತಿಸುತ್ತಿರುವುದಾಗಿ ಈ ಗಿರೀಶ್ ಅಂಜಲಿ ಬಳಿ ಹೇಳಿಕೊಂಡಿದ್ದನಂತೆ. ಇದಕ್ಕೆ ಅಂಜಲಿ ಒಪ್ಪಿರಲಿಲ್ಲ.
ತನ್ನ ಪ್ರೀತಿಯನ್ನ ನಿರಾಕರಿಸಿದ್ರೆ ನೇಹಾಳಿಗೆ ಆದ ಗತಿಯೇ ನಿನಗೂ ಆಗಲಿದೆ ಎಂದು ಕೂಡ ಈ ನೀಚ ಎಚ್ಚರಿಸಿದ್ದನಂತೆ. ಆದ್ರೆ ಅಂಜಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಅದ್ರೆ ಇಂದು ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಸಮಯ ನೋಡಿ ಅಂಜಲಿ ಮನೆಗೆ ನುಗ್ಗಿದ ಆರೋಪಿ ಗಿರೀಶ್ ಆಕೆಯನ್ನ ಬರ್ಬರವಾಗಿ ಕೊಂದು ಎಸ್ಕೆಪ್ ಆಗಿದ್ದಾನೆ.
ಇನ್ನು ಈ ಪ್ರಕರಣದಲ್ಲಿ ಇನ್ನೂ ಆರೋಪಿಯನ್ನು ಸೆರೆಹಿಡಿದಿಲ್ಲ ಎಂಬ ಕಾರಣಕ್ಕೆ ಹುಬ್ಬಳ್ಳಿ ಸಾರ್ವಜನಿಕರು ಪೋಲಿಸರ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಟೈರ್‌ಗಳನ್ನ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಸ್ಥಳಿಯರು, ಆರೋಪಿಯನ್ನ ಹಿಡಿದು ಗಲ್ಲು ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.