ಮಾರಿಯುಪೋಲ್ಗೆ ಶರಣಾಗುವಂತೆ ಮಾಸ್ಕೋದ ಎಚ್ಚರಿಕೆಯ ನಡುವೆ ಉಕ್ರೇನ್ ರಷ್ಯಾಕ್ಕೆ ತಲೆಬಾಗಲು ನಿರಾಕರಿಸಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದರು, ಆದರೆ ಮಾತುಕತೆ ವಿಫಲವಾದರೆ “ಮೂರನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ಅರ್ಥ” ಎಂದು ಎಚ್ಚರಿಸಿದರು.
“ನಾನು ಅವರೊಂದಿಗೆ ಮಾತುಕತೆಗೆ ಸಿದ್ಧನಿದ್ದೇನೆ. ಕಳೆದ ಎರಡು ವರ್ಷಗಳಿಂದ ನಾನು ಸಿದ್ಧನಾಗಿದ್ದೆ ಮತ್ತು ಮಾತುಕತೆಗಳಿಲ್ಲದೆ ನಾವು ಈ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದರು, ಆದರೆ ಮಾತುಕತೆ ವಿಫಲವಾದರೆ, ಮೂರನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ಅರ್ಥ” ಎಂದು ಭಾನುವಾರ ರಾತ್ರಿ ಸಿಎನ್ಎನ್ನೊಂದಿಗೆ ಮಾತನಾಡುವಾಗ ಝೆಲೆನ್ಸ್ಕಿ ಹೇಳಿದರು.
ಮಾಸ್ಕೋ ಸಮಯ ಸೋಮವಾರ 5 ಗಂಟೆಗೆ ಮಾರಿಯುಪೋಲ್ ನಗರವನ್ನು ತೊರೆಯಬೇಕೆಂಬ ರಷ್ಯಾದ ಬೇಡಿಕೆಯನ್ನು ಉಕ್ರೇನ್ ಉಪ ಪ್ರಧಾನಿ ತಿರಸ್ಕರಿಸಿದ್ದಾರೆ. ಯಾವುದೇ ಶರಣಾಗತಿಯ ಪ್ರಶ್ನೆಯೇ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯವು ಮಾರಿಯುಪೋಲ್ ಶರಣಾಗತಿಗೆ ಬದಲಾಗಿ ಮಾನವೀಯ ಕಾರಿಡಾರ್ ತೆರೆಯಲು ಮುಂದಾಗಿದೆ ಎಂದು ಬಿಬಿಸಿ ಹೇಳಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ಮುಕ್ತರಾಗಿದ್ದೇವೆ. ಹೋರಾಟವನ್ನು ಕೊನೆಗೊಳಿಸಲು ಮಾತುಕತೆಯೊಂದೇ ದಾರಿ. ಮಾತುಕತೆಯನ್ನು ಸಾಧ್ಯವಾಗಿಸಲು ನಾವು ಯಾವುದೇ ವಿಧಾನವನ್ನಾದರೂ ಬಳಸಬೇಕು. ಆದಾಗ್ಯೂ ರಷ್ಯಾ ವಶಕ್ಕೆ ಪಡೆದಿರುವ ಹಾಗೂ ಸ್ವತಂತ್ರವೆಂದು ಗುರುತಿಸಿರುವ ಪ್ರದೇಶಗಳಿಗೆ ಸಂಬಂಧಿಸಿದ ಯಾವುದೇ ಒಪ್ಪಂದವನ್ನು ತಿರಸ್ಕರಿಸುವುದಾಗಿ ಝೆಲೆನ್ಸ್ಕಿ ತಿಳಿಸಿದ್ದಾರೆ.
ಉಕ್ರೇನಿಯನ್ ನಾಯಕನು ತನ್ನ ದೇಶವು ನ್ಯಾಟೋ ಸದಸ್ಯನಾಗಿದ್ದರೆ, ಯುದ್ಧವೇ ಇರುತ್ತಿರಲಿಲ್ಲ ಎಂದು ಹೇಳಿದ ಝೆಲೆನ್ಸ್ಕಿ, “ನನ್ನ ದೇಶಕ್ಕೆ, ನನ್ನ ಜನರಿಗೆ ಭದ್ರತೆಯ ಖಾತರಿ ಪಡಿಸಲು ನಾನು ಬಯಸುತ್ತೇನೆ. NATO ಸದಸ್ಯರು ಮೈತ್ರಿಯಲ್ಲಿ ನಮ್ಮನ್ನು ಸೇರಲು ಸಿದ್ಧರಿದ್ದರೆ, ತಕ್ಷಣ ಅದನ್ನು ಮಾಡಿ. ಏಕೆಂದರೆ ಜನರು ಪ್ರತಿದಿನ ಸಾಯುತ್ತಿದ್ದಾರೆ” ಎಂದು ಝೆಲೆನ್ಸ್ಕಿ ಹೇಳಿದರು. ಫೆಬ್ರವರಿ 24 ರಂದು ಆಕ್ರಮಣ ಪ್ರಾರಂಭವಾದಾಗಿನಿಂದ NATO ಒದಗಿಸಿದ ಸಹಾಯಕ್ಕಾಗಿ ಅವರು ಕೃತಜ್ಞರಾಗಿದ್ದರು.