ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ( Education minister dharmendra pradhan) ನೀಟ್ ಯುಜಿ (NEET – UG) ಮರು ಪರೀಕ್ಷೆ ಇಲ್ಲ ಎಂಬ ಸುಪ್ರೀಂಕೋರ್ಟ್ (Supreme court) ಆದೇಶವನ್ನು ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರೀಕ್ಷೆಯ ವಿಷಯಕ್ಕೆ ಬಂದಾಗ ಅದು ಉನ್ನತ ಶಿಕ್ಷಣ ಅಥವಾ ಉದ್ಯೋಗವೇ ಆಗಿರಲಿ ನಾವು ಯಾವುದೇ ರೀತಿಯ ಉಲ್ಲಂಘನೆ ಸಹಿಸಲ್ಲ ಎಂದು ಹೇಳಿದ್ದಾರೆ.
ಇದನ್ನು ತಡೆಯುವುದಕ್ಕಾಗಿಯೇ ಮೋದಿ ಸರ್ಕಾರ (Modi government) ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತಂದಿದೆ. ಪಬ್ಲಿಕ್ ಎಕ್ಸಾಮಿನೇಷನ್ಸ್ ಕಾಯಿದೆಯನ್ನು (Public examination act) ಸುಪ್ರೀಂಕೋರ್ಟ್ ಮುಂದೆ ಪ್ರಸ್ತುತಪಡಿಸುತ್ತಾ, ನಮ್ಮ ಸರ್ಕಾರವು ಪಾರದರ್ಶಕ, ವಂಚನೆ-ಮುಕ್ತ ಮತ್ತು ಶೂನ್ಯ-ದೋಷಗಳ ಪರೀಕ್ಷಾ ವ್ಯವಸ್ಥೆಯನ್ನು ಹೊಂದಲು ಬದ್ಧವಾಗಿದೆ ಎಂದು ನಾವು ಭರವಸೆ ನೀಡಿದ್ದೇವೆ ಅಂತ ಹೇಳಿದ್ದಾರೆ.