ನೀಟ್ ಯುಜಿ ಪೇಪರ್(NEET UG Paper) ಸೋರಿಕೆ ಪ್ರಕರಣದ 20 ಆರೋಪಿಗಳನ್ನು ಬಿಹಾರದ(Bihar) ಪಾಟ್ನಾದ ಬ್ಯೂರ್ ಜೈಲಿನಲ್ಲಿ ಕೇಂದ್ರೀಯ ತನಿಖಾ ದಳ (CBI) ಭಾನುವಾರ ತೀವ್ರ ವಿಚಾರಣೆ ನಡೆಸಿತು. ಈ ಪೈಕಿ 13 ಆರೋಪಿಗಳನ್ನು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (EOU) ಬಂಧಿಸಿದ್ದು, ಏಳು ಮಂದಿ ಸಿಬಿಐನ ಬಂಧನದಲ್ಲಿದ್ದಾರೆ. 13 ಆರೋಪಿಗಳ ವಿಚಾರಣೆಗಾಗಿ ಸಿಬಿಐ ನ್ಯಾಯಾಲಯದಿಂದ ವಿಶೇಷ ಅನುಮತಿ ಕೋರಿತ್ತು.
ನನನನನನ13 ರಲ್ಲಿ, ಆರು ಮಂದಿ ಪರೀಕ್ಷಾ ಮಾಫಿಯಾದ ಭಾಗವಾಗಿದ್ದಾರೆ, ಆದರೆ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಪೋಷಕರು ಆಗಿದ್ದಾರೆ. ಸಿಬಿಐ ಬಂಧದಲ್ಲಿರುವವರಲ್ಲಿ, ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್ (Exanul Hak) ಮತ್ತು ವೈಸ್ ಪ್ರಿನ್ಸಿಪಾಲ್ ಇಮ್ತಿಯಾಜ್ ಆಲಂ (Imtiyaz Alam) ಅವರೊಂದಿಗೆ ದಿನಪತ್ರಿಕೆಯೊಂದರ ಪತ್ರಕರ್ತರನ್ನು ಸಿಬಿಐ ಪ್ರಶ್ನಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ತಿದ್ದಿದ ಆರೋಪದ ಮೇಲೆ ಈರ್ವರೂ ಆರೋಪಿಗಳನ್ನು ಜಾರ್ಖಂಡ್‌ನ ಹಜಾರಿಬಾಗ್‌ನಿಂದ ಪಾಟ್ನಾಕ್ಕೆ ಕರೆತರಲಾಗಿತ್ತು.
ಆರೋಪಿಗಳಾಗಿದ್ದ ಚಿಂಟು(Chintu), ಮುಖೇಶ್(Mukhesh), ಮನೀಶ್(Manish) ಮತ್ತು ಮುಖೇಶ್(Mukhesh) ಅವರ ಪ್ರತ್ಯೇಕ ಹೇಳಿಕೆಗಳನ್ನು ದಾಖಲಿಸಿದ ನಂತರ, ಇಂದು ಇವರ ಮುಖಾಮುಖಿ ಪ್ರಶ್ನೆಯನ್ನು ನಡೆಸಲಾಯಿತು. ಹೇಳಿಕೆಗಳಲ್ಲಿ ಹಲವಾರು ವಿರೋಧಾಭಾಸಗಳು ಕಂಡುಬಂದಿವೆ. ವಿಚಾರಣೆಯ ಸಮಯದಲ್ಲಿ, ಸಂಸ್ಥೆಯು ಎಹ್ಸಾನುಲ್ ಹಕ್ ಅವರ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿತು. ಹಜಾರಿಬಾಗ್‌ನಿಂದ ಕರೆತರಲಾದ ಮೂವರು ಆರೋಪಿಗಳ ಕರೆ ದಾಖಲೆಗಳನ್ನೂ ಸಿಬಿಐ ಪರಿಶೀಲಿಸಿದೆ. ಮೂಲಗಳ ಪ್ರಕಾರ, ಪ್ರಾಥಮಿಕ ವಿಚಾರಣೆಯ ನಂತರ ಸಿಬಿಐ ಆರೋಪಿಗಳನ್ನು ದೆಹಲಿಗೆ ಕರೆದೊಯ್ಯಬಹುದು.
ಏತನ್ಮಧ್ಯೆ, ಬಿಹಾರದ ನೀಟ್ ಪೇಪರ್ ಸೋರಿಕೆ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ(Sanjeev Mukhiya) ಅವರನ್ನು ಬಂಧಿಸಲು ತನಿಖಾ ಸಂಸ್ಥೆಯ ಹಲವಾರು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಶನಿವಾರದ ವಿಚಾರಣೆ ವೇಳೆ ಹೆಚ್ಚಿನ ಆರೋಪಿಗಳು ಸಂಜೀವ್ ಮುಖಿಯಾ ಮತ್ತು ಸಿಕಂದರ್ ಯಡ್ವೆಂದು ಎಂಬುವರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ ಆತ , ಪ್ರಕರಣದ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ.
ಸಂಜೀವ್ ಮುಖಿಯಾ ಅವರು ಮೇ 4 ರಂದು NEET-UG ಪರೀಕ್ಷೆಯ ಒಂದು ದಿನ ಮೊದಲು ಪಾಟ್ನಾದ ಲರ್ನ್ ಪ್ಲೇ ಸ್ಕೂಲ್‌ಗೆ ಸಂಬಂಧಿಸಿದ ಬಾಲಕರ ಹಾಸ್ಟೆಲ್‌ನಲ್ಲಿ ಸುಮಾರು 25 ಅಭ್ಯರ್ಥಿಗಳಿಗೆ ವಸತಿ ಕಲ್ಪಿಸಿದ್ದರು. ಅದೇ ಹಾಸ್ಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಒದಗಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರ ಲೋಕಸೇವಾ ಆಯೋಗದ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರ ಪುತ್ರ ಶಿವ ಈಗಾಗಲೇ ಜೈಲು ಪಾಲಾಗಿದ್ದಾರೆ.
ಮತ್ತೊಂದೆಡೆ, ಬಿಹಾರ ಪೊಲೀಸ್‌ನ(Bihar Police) ಆರ್ಥಿಕ ಅಪರಾಧಗಳ ಘಟಕ (EOU) ತನಿಖೆಯ ಪ್ರಕಾರ, ದಾನಾಪುರದ ಪುರಸಭೆಯ ಜೂನಿಯರ್ ಎಂಜಿನಿಯರ್ ಸಿಕಂದರ್ ಯಡ್ವೆಂದು ನೀಟ್ ಪ್ರಶ್ನೆ ಪತ್ರಿಕೆಗಳ ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿರುವ ಇನ್ನೊಬ್ಬ ಪ್ರಮುಖ ಶಂಕಿತ ಆಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ.