ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಜಯ ಸಾಧಿಸಿದ್ದು, ಜೂನ್ 7ರಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನೂತನ ಚುನಾಯಿತ ಸಂಸದರ ಸಭೆ ನಡೆಯಲಿದೆ.
ವರದಿಯಂತೆ, ಸಂಸದರು ನರೇಂದ್ರ ಮೋದಿ (Narendra Modi) ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡುತ್ತಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸದ್ಯದ ಮಾಹಿತಿಯಂತೆ ಜೂನ್ 9ರಂದು ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ. ಆದರೆ, ಅಧಿಕೃತವಾಗಿ ಇದು ಬಹಿರಂಗವಾಗಿಲ್ಲ.
ದೇಶದಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ಮಿತ್ರ ಪಕ್ಷಗಳೊಂದಿಗೆ ಸೇರಿ ಅಧಿಕಾರ ನಡೆಸಬೇಕಿದೆ. ಎನ್ ಡಿಎ ಒಟ್ಟು 293 ಸ್ಥಾನಗಳನ್ನು ಪಡೆದಿದೆ.
ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಒಕ್ಕೂಟದ ಪ್ರಮುಖ ವ್ಯಕ್ತಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಸಚಿವ ಸಂಪುಟದ ಸ್ಥಾನ ಮಾನಗಳ ಕುರಿತು ಈಗಾಗಲೇ ಎನ್ ಡಿಎದಲ್ಲಿ ನಡೆಯುತ್ತಿದೆ.