ಬಹುಭಾಷಾ ನಟಿ ನಯನಾತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವಂ ಮದುವೆ ಸಡಗರ ಸಂಭ್ರಮದಿಂದ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜರುಗಿತು.
ತಮಿಳುನಾಡು ಚಿತ್ರರಂಗದ ಮಹಿಳಾ ಸೂಪರ್ ಸ್ಟಾರ್ ಆಗಿರುವ ನಯನತಾರಾ ಮದುವೆ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದು, ಬಹುದಿನಗಳ ಗೆಳೆಯರಾಗಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವಂ ನಿರೀಕ್ಷೆಯಂತೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ನಯನತಾರಾ ಮತ್ತು ವಿಘ್ನೇಶ್ ಶಿವಂ ಮದುವೆಗೆ ಬಾಲಿವುಡ್ ನಟ ಶಾರೂಖ್ ಖಾನ್, ರಜನಿಕಾಂತ್, ತಮಿಳುನಾಡಿನ ಸೂಪರ್ ಸ್ಟಾರ್ ಗಳಾದ ವಿಜಯ್, ಸೂರ್ಯ, ವಿಜಯ್ ಸೇತುಪತಿ, ಅಜಿತ್ ಕುಮಾರ್ ಸೇರಿದಂತೆ ಹಲವು ಸಿನಿ ಸ್ಟಾರ್ ಗಳು ಉಪಸ್ಥಿತರಿದ್ದರು.













