ಸದ್ಯ ಭಾರತದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಹಾಗೂ Drugs On Cruise ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದ ಉಸ್ತಯುವಾರಿ ವಹಿಸಿದ್ದ NCB ಅಧಿಕಾರಿ ಸಮೀರ್ ವಾಂಖೆಡೆಯವರ ಮೇಲೆ ನಿರಂತರ ಆರೋಪ ಮಾಡಿದ ನಂತರ ಮಲ್ಲಿಕ್ ಬಂಧನವಾಗಿದೆ.
ನವಾಬ್ ಮಲ್ಲಿಕ್ ಕುರಿತ 5 ಅಂಶಗಳು ಇಲ್ಲಿವೆ ನೋಡಿ
1) NCP ವಕ್ತಾರಾಗಿರುವ ಮಲ್ಲಿಕ್ MVA ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಕಲ್ಯಾಣ ಇಲಾಖೆ ಸಚಿವರಾಗಿದ್ದರು. NCP ವಕ್ತಾರರಾಗಿದ್ದ ಅವರು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.
2) ಮುಂಬೈನ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಿಂದ ಐದು ಭಾರೀ ಶಾಸಕರಾಗಿರುವ ಮಲ್ಲಿಕ್ ಮರಾಠ ಕೇಂದ್ರಿತ ಪಕ್ಷವೆಂದೇ ಖ್ಯಾತಿ ಪಡೆದಿರುವ NCPಯಲ್ಲಿ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತ ನಾಯಕ ಎಂಬುದು ಗಮನಾರ್ಹ.

3) ಕಾಂಗ್ರೆಸ್ನಿಂದ ರಾಜಕೀಯ ಜೀವನ ಪ್ರಾರಂಭಿಸಿದ ಮಲ್ಲಿಕ್ 2001ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದರು. ನಂತರದ ದಿನಗಳಲ್ಲಿ ಅವರು NCP ಸೇರಿದ್ದರು.
4) 2005ರಲ್ಲಿ NCP ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಅವರು 2005ರಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದ ನ್ಯಾಯಮೂರ್ತಿ ಸಾವಂತ್ ಆಯೋಗವು ಮಲ್ಲಿಕ್ ದೋಷಿ ಎಂದು ತೀರ್ಪು ನೀಡದ್ದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
5) 2021ರಲ್ಲಿ Drugs On Cruise ಪ್ರಕರಣದಲ್ಲಿ NCB ಅಧಿಕಾರಿಗಳು ಶಾರುಖ್ ಪುತ್ರ ಆರ್ಯನ್ನನ್ನು ಬಂಧಿಸಿದ್ದರು ಮತ್ತು 2021ರ ಪ್ರಾರಂಭದಲ್ಲಿ ಮಲ್ಲಿಕ್ ಸಮೀರ್ ಅಳಿಯ್ನು ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳ ತಂಡ ಬಂದಿಸಿತ್ತು. ಆಗಾಗ NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ದ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮಲ್ಲಿಕ್ ಸುದ್ದಿಯಲ್ಲಿದ್ದರು.
			
                                
                                
                                
