ಇಂದು ದೇಶಾದ್ಯಂತ 5ನೇ ಹಂತದ ಲೋಕಸಭಾ ಚುನಾವಣೆ (Parliament Election) ನಡೆಯುತ್ತಿದೆ. ಐದನೇ ಹಂತದ ಮತದಾನದಲ್ಲಿ ಮತದಾರ 695 ಅಭ್ಯರ್ಥಿಗಳ ಹಣೆ ಬರಹವನ್ನು ನಿರ್ಧರಿಸಲಿದ್ದಾನೆ. ಇಂದಿನ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. 7 ಹಂತದಲ್ಲಿ ದೇಶಾದ್ಯಂತ ಚುನಾವಣೆ ನಡೆಯುತ್ತಿದ್ದು, ಇನ್ನು 2 ಹಂತದ ಮತದಾನ ಮಾತ್ರ ಬಾಕಿಯಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು ಸಂಜೆ 6 ಗಂಟೆವರೆಗೆ ನಡೆಯಲಿದೆ. ಐದನೇ ಹಂತದ ಮತದಾನ 49 ಸ್ಥಾನಗಳಿಗೆ ನಡೆಯುತ್ತಿದೆ. ಒಟ್ಟು 8 ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ (Lok Sabha Constituencies) 695 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಐದನೇ ಸುತ್ತಿನಲ್ಲಿ ಮತದಾನ ನಡೆಯುತ್ತಿರುವ ಸ್ಥಾನಗಳಲ್ಲಿ ಉತ್ತರ ಪ್ರದೇಶದ 14 (UP), ಮಹಾರಾಷ್ಟ್ರದ 13 (Maharashtra), ಪಶ್ಚಿಮ ಬಂಗಾಳದ 7 (West Bengal) ಬಿಹಾರ (Bihar) ಮತ್ತು ಒಡಿಶಾದಲ್ಲಿ (Odissa) ತಲಾ ಐದು ಸ್ಥಾನಗಳು ಸೇರಿವೆ. ಇದಲ್ಲದೆ ಜಾರ್ಖಂಡ್‌ನ (Jharkhand) ಮೂರು ಸ್ಥಾನಗಳು, ಜಮ್ಮು-ಕಾಶ್ಮೀರ (J&K) ಮತ್ತು ಲಡಾಖ್‌ನ (Ladak)। ತಲಾ ಒಂದು ಸ್ಥಾನಕ್ಕೂ ಮತದಾನ ನಡೆಯುತ್ತಿದೆ.