• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯ: ಕರ್ನಾಟಕಕ್ಕೆ ರಾಷ್ಟ್ರೀಯ ಪ್ರಶಸ್ತಿ

ಪ್ರತಿಧ್ವನಿ by ಪ್ರತಿಧ್ವನಿ
June 16, 2026
in Top Story, ಕರ್ನಾಟಕ, ರಾಜಕೀಯ
0
ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯ: ಕರ್ನಾಟಕಕ್ಕೆ ರಾಷ್ಟ್ರೀಯ ಪ್ರಶಸ್ತಿ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ‘ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯತ್ ಸಾಮರ್ಥ್ಯ’ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಕರ್ನಾಟಕ ತನ್ನದಾಗಿಸಿಕೊಡಿದೆ.ಗೋವಾದಲ್ಲಿ ನಡೆದ 2026ನೇ ಸಾಲಿನ ವಿಶ್ವ ಪವನ ದಿನಾಚರಣೆಯಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ “ಹೈಯೆಸ್ಟ್‌ ವಿಂಡ್‌ ಕ್ಯಾಪಾಸಿಟಿ ಪೈಪ್‌ಲೈನ್” ಪ್ರಶಸ್ತಿ ಸಂದಿದೆ.

Siddaramaiah meet CM DKS : ಸಿದ್ದರಾಮಯ್ಯ ಭೇಟಿ ಮಾಡಿದ ಸಿಎಂ ಡಿಕೆ ಶಿವಕುಮಾರ್‌..! #pratidhvani

ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಿದರು.

ನವ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಗೋವಾದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ರಾಮಕೃಷ್ಣ ಧವಳೀಕರ್ ಅವರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು.

Abhijit Deepke slapped: ಪ್ರತಿಭಟನೆ ವೇಳೆ CJP ಸ್ಥಾಪಕ ದೀಪ್ಕೆಗೆ ಯುವಕನೊಬ್ಬ ಹ**!  #pratidhvani

ಸದ್ಯ 9 ಗಿಗಾ ವ್ಯಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಈ ಪ್ರಶಸ್ತಿಯೊಂದಿಗೆ ಪವನ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ಬಲಪಡಿಸುವಲ್ಲಿ ರಾಜ್ಯದ ನಾಯಕತ್ವ ಹಾಗೂ ಬದ್ಧತೆಯನ್ನು ಸಾಬೀತುಪಡಿಸಿದಂತಾಗಿದೆ.

ಪವನ ವಿದ್ಯುತ್‌ ವಲಯದಲ್ಲಿ ಕರ್ನಾಟಕದ ಸಾಧನೆಗೆ ಸಂದಿರುವ ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌, ʼಕಳೆದ ಬಾರಿಯೂ ಕರ್ನಾಟಕ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಈ ಪ್ರಶಸ್ತಿಯು ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನವೀಕರಿಸಬಹುದಾದ ಇಂಧನ ವಲಯದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ ಹೂಡಿಕೆ ಆಕರ್ಷಿಸುವ ಜತೆಗೆ ದೇಶದ ಇಂಧನ ಪರಿವರ್ತನೆ ಮತ್ತು ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೈಜೋಡಿಸಲಿದ್ದೇವೆʼಎಂದಿದ್ದಾರೆ.

Abhijeet Dipke Slapped : ಪ್ರತಿಭಟನೆ ಸ್ಥಳದಲ್ಲೇ ಕಪಾಳ ಮೋಕ್ಷ.! #AbhijeetDipkeSlapped #CJP

ಈ ಬಗ್ಗೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರತಿಕ್ರಿಯಿಸಿದ್ದು, ʼಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯಕ್ಕಾಗಿ ಕರ್ನಾಟಕಕ್ಕೆ ದೊರೆತಿರುವ ಈ ಪ್ರಶಸ್ತಿಯ ರಾಜ್ಯದ ಪ್ರಗತಿಪರ ನೀತಿ, ಹೂಡಿಕೆ-ಸ್ನೇಹಿ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಇರುವ ಸಾಂಸ್ಥಿಕ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದರೊಂದಿಗೆ ಈ ವಲಯದಲ್ಲಿನ ಹೂಡಿಕೆಗೆ ಆದ್ಯತೆ ನೀಡಲು ಇಂಧನ ಇಲಾಖೆಯು ಉದ್ಯಮದ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆʼ ಎಂದರು.

ಪ್ರಶಸ್ತಿ ಸ್ವೀಕರಿಸಿರುವ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಮಾತನಾಡಿ, ʼರಾಜ್ಯಕ್ಕೆ ಈ ಪ್ರಶಸ್ತಿ ಸಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕ್ರೆಡಲ್‌ ಹಾಗೂ ಉದ್ಯಮದ ಪಾಲುದಾರರ ಉತ್ತಮ ಸಹಯೋಗದಿಂದ ಇದು ಸಾಧ್ಯವಾಗಿದೆ.ಈ ವಲಯದಲ್ಲಿ ಹೂಡಿಕೆ ಹಾಗೂ ಯೋಜನೆಯ ಅನುಷ್ಠಾನವನ್ನು ಸುಗಮಗೊಳಿಸಲು ಮತ್ತು ರಾಜ್ಯ ಮತ್ತು ರಾಷ್ಟ್ರಕ್ಕೆ ನವೀಕರಿಸಬಹುದಾದ ಇಂಧನದ ಮೂಲಕ ಸುರಕ್ಷಿತ ಇಂಧನ ಭವಿಷ್ಯ ರೂಪಿಸುವ ಪ್ರಯತ್ನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲು ಬದ್ಧರಾಗಿದ್ದೇವೆʼ ಎಂದಿದ್ದಾರೆ.

Priyank Kharge : ಬಿಜೆಪಿಯವ್ರಿಗೆ ಕಾಮನ್‌ ಸೆನ್ಸ್‌ ಇದ್ಯಾ? ಅವ್ರ ಮಾತು ಕೇಳಿ ಕೆಲ್ಸ ಮಾಡೋಕಾಗಲ್ಲ..! #bjp

ವಿಶ್ವ ಪವನ ದಿನ 2026

ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಗೋವಾ ಇಂಧನ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಪವನ ದಿನ ಆಯೋಜಿಸಿತ್ತು. ʼಪವನ ಶಕ್ತಿ: ಮಹತ್ವಾಕಾಂಕ್ಷೆಯಿಂದ ವೇಗವರ್ಧನೆಗೆʼ ಎಂಬ ಪರಿಕಲ್ಪನೆಯಡಿ ಆಯೋಜಿಸಿದ್ದ ಈ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯೂಟಿಎಂಎ) ಸೇರಿದಂತೆ ಡಬ್ಲ್ಯೂಐಪಿಪಿಎ, ಐಡಬ್ಲ್ಯೂಪಿಎ ಭಾಗಿಯಾಗಿದ್ದವು. ನೀತಿ ನಿರೂಪಕರು, ತಂತ್ರಜ್ಞಾನ ವಲಯದ ಜಾಗತಿಕ ನಾಯಕರು, ಹೂಡಿಕೆದಾರರು, ಉದ್ಯಮದ ಪಾಲುದಾರರ ಸಂವಾದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತ್ತು.

ವಿಶ್ವ ಪವನ ದಿನದ ಆಚರಣೆಯ ಭಾಗವಾಗಿ ನವೀಕರಿಸಬಹುದಾದ ಇಂಧನ ಅದರಲ್ಲೂ ವಿಶೇಷವಾಗಿ ಪವನ ಶಕ್ತಿಯನ್ನು ಉತ್ತೇಜಿಸುವಲ್ಲಿ ಅನುಕರಣೀಯ ಉಪಕ್ರಮಗಳನ್ನು ಪಾಲಿಸುವ ಹಾಗೂ ವಿಶೇಷ ಸಾಧನೆ ಮಾಡಿರುವ ರಾಜ್ಯಗಳನ್ನು ಗುರುತಿಸಿ, ಗೌರವಿಸಲಾಯಿತು.

Priyank Kharge : ಬೇಕಾಬಿಟ್ಟಿ ಗ್ಯಾರಂಟಿಯಿಂದ ಆರ್ಥಿಕತೆಗೆ ಎಫೆಕ್ಟ್ ಎಂಬ ನಿರ್ಮಲಾ ಮಾತಿಗೆ ಖರ್ಗೆ ಪ್ರತಿಕ್ರಿಯೆ..!
Previous Post

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾವಣಗೆರೆಯಲ್ಲಿ ಕಂತೆ ಕಂತೆ ನೋಟು..ಚಿನ್ನ..!

Next Post

ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆ ಬಿಜೆಪಿ-ಜೆಡಿಎಸ್‌ ಕೂಸು, ನಮ್ಮದಲ್ಲ: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

Related Posts

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ
Top Story

ಕೇಂದ್ರದ ಕಠಿಣ ಕ್ರಮ: ಜೂನ್ 22ರವರೆಗೆ ಟೆಲಿಗ್ರಾಂ ನಿರ್ಬಂಧ: ಯಾಕೆ ಗೊತ್ತೆ 

by ಪ್ರತಿಧ್ವನಿ
June 16, 2026
0

ನೀಟ್-ಯುಜಿ 2026 ಮರುಪರೀಕ್ಷೆಯ ಪಾರದರ್ಶಕತೆ ಕಾಪಾಡುವ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ, ವದಂತಿಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೇಜಿಂಗ್ ವೇದಿಕೆಗೆ ತಾತ್ಕಾಲಿಕ...

Read moreDetails
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಕರ್ನಾಟಕ ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ಪ್ರಹ್ಲಾದ್ ಜೋಶಿ ಮುಂಚೂಣಿ? ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ

June 16, 2026
ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

June 16, 2026
ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

June 16, 2026
ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

June 16, 2026
Next Post
ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆ ಬಿಜೆಪಿ-ಜೆಡಿಎಸ್‌ ಕೂಸು, ನಮ್ಮದಲ್ಲ: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆ ಬಿಜೆಪಿ-ಜೆಡಿಎಸ್‌ ಕೂಸು, ನಮ್ಮದಲ್ಲ: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada