• Home
  • About Us
  • ಕರ್ನಾಟಕ
Sunday, January 25, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್

ಪ್ರತಿಧ್ವನಿ by ಪ್ರತಿಧ್ವನಿ
December 6, 2025
in ಕರ್ನಾಟಕ, ದೇಶ, ರಾಜಕೀಯ
0
ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಗೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಪ್ರಕರಣದ ಕುರಿತು ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಗೆ ನೋಟಿಸ್ ಜಾರಿ ಮಾಡಿದೆ.

ನ. 29 ರಂದು ನೀಡಲಾದ ನೋಟಿಸ್ ಪ್ರಕಾರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿ. 19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಥವಾ ಕೋರಲಾದ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಡಿ.ಕೆ.ಶಿವಕುಮಾರ್ ವೈಯಕ್ತಿಕ ಮತ್ತು ರಾಜಕೀಯ ಹಿನ್ನೆಲೆ, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ, ಅವರು ವರ್ಗಾಯಿಸಿದ್ದಾರೆ ಎನ್ನಲಾದ ಹಣದ ಸಂಪೂರ್ಣ ವಿವರ ಅಥವಾ ಯಂಗ್ ಇಂಡಿಯಾ ಜೊತೆಗಿನ ನಂಟಿನ ಬಗ್ಗೆ ಆದಾಯ ತೆರಿಗೆ ಸಲ್ಲಿಕೆಗಳು, ಹಣಕಾಸು ಹೇಳಿಕೆಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿದ ದೇಣಿಗೆ ಪ್ರಮಾಣಪತ್ರಗಳ ಸಂಪೂರ್ಣ ವಿವರಗಳನ್ನು ಡಿ.19ರೊಳಗೆ ಸಲ್ಲಿಸುವಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಕೋರಿದೆ

ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಗೆ ಡಿ.ಕೆ. ಶಿವಕುಮಾ‌ರ್ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ ನೀಡಿದ್ದಾರೆ ಹಾಗೂ ಅವರ ಟ್ರಸ್ಟ್‌ ಮೂಲಕ ₹2 ಕೋಟಿ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿಯಲ್ಲಿ ಈ ಹಿಂದೆ ಉಲ್ಲೇಖಿಸಿತ್ತು. ಶಿವಕುಮಾ‌ರ್ ಅವರು ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಈ ಮೊತ್ತ ಪಾವತಿಸಿದ್ದಾರೆ ಎಂದೂ ತಿಳಿಸಿತ್ತು. ಸುರೇಶ್‌ ಅವರು ಯಂಗ್ ಇಂಡಿಯನ್ ಸಂಸ್ಥೆಗೆ ₹25 ಲಕ್ಷ ದೇಣಿಗೆ ನೀಡಿದ್ದರು.

ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ 2014ರ ಜೂನ್ 26ರಂದು ದಾಖಲಿಸಿದ ಖಾಸಗಿ ದೂರನ್ನು ಪಟಿಯಾಲಾ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ, ಇ.ಡಿ ತನಿಖೆಯು 2021ರಲ್ಲಿ ಶುರುವಾಗಿತ್ತು.

ಸೋನಿಯಾ, ರಾಹುಲ್, ಸ್ಯಾಮ್ ಪಿತ್ರೋಡಾ, ಕಾಂಗ್ರೆಸ್‌ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕ‌ರ್ ಫರ್ನಾಂಡಿಸ್, ಖಾಸಗಿ ಕಂಪನಿಯಾದ ಯಂಗ್ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದನ್ನು ದೂರಿನಲ್ಲಿ ಎತ್ತಿತೋರಿಸಲಾಗಿತ್ತು. ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ಹಣದ ಅಕ್ರಮ ವರ್ಗಾವಣೆ ಮಾಡಿದ್ದರು ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿತ್ತು.

Tags: #Rahul GandhiAICC Soniya GandhiDK Shivakumarnational herald casenational herald case latest news
Previous Post

Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

Next Post

ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

Related Posts

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”
ಇದೀಗ

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

by ಪ್ರತಿಧ್ವನಿ
January 25, 2026
0

ಬೆಂಗಳೂರು: ನವೀಕರಿಸಬಹುದಾದ ಇಂಧನ ಯೋಜನೆಗಳು ಕೃಷಿ ಭೂಮಿಯಲ್ಲಿ ಕಾರ್ಯಾರಂಭಿಸುವುದುಕ್ಕೆ ಪೂರ್ವಾನುಮತಿ ಪಡೆಯುವ ಅವಶ್ಯತಕೆ ಇಲ್ಲ. ಇದಕ್ಕಾಗಿ ನೂತನ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ, ಈ ಹೆಜ್ಜೆಯು...

Read moreDetails
ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

January 25, 2026
ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

January 25, 2026
ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

January 25, 2026
ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

January 25, 2026
Next Post
ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

Recent News

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:
Top Story

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

by ಪ್ರತಿಧ್ವನಿ
January 25, 2026
ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ
Top Story

ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
January 25, 2026
ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ
Top Story

ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

by ಪ್ರತಿಧ್ವನಿ
January 25, 2026
Daily Horoscope: ಇಂದು ವ್ಯವಹಾರದಲ್ಲಿ ಅತಿ ಹೆಚ್ಚು ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope: ಇಂದು ವ್ಯವಹಾರದಲ್ಲಿ ಅತಿ ಹೆಚ್ಚು ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 25, 2026
Siddaramaiah: ಹಣ ನಮ್ಮದು ಹೆಸರು ಮಾತ್ರ ಕೇಂದ್ರದ್ದು: ಹುಬ್ಬಳ್ಳಿಯಲ್ಲಿ ಗುಡುಗಿದ ಸಿದ್ದರಾಮಯ್ಯ
Top Story

Siddaramaiah: ಹಣ ನಮ್ಮದು ಹೆಸರು ಮಾತ್ರ ಕೇಂದ್ರದ್ದು: ಹುಬ್ಬಳ್ಳಿಯಲ್ಲಿ ಗುಡುಗಿದ ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

January 25, 2026
ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

January 25, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!