69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅತ್ಯುತ್ತಮ ಕನ್ನಡ ಚಿತ್ರವಾಗಿ ʼ777 ಚಾರ್ಲಿʼ ಆಯ್ಕೆಯಾಗಿದೆ.
ತಮಿಳಿನ ಅತ್ಯುತ್ತಮ ಚಿತ್ರವಾಗಿ ʼಕಡೈಸಿ ವ್ಯವಸಾಯಿʼ ಆಯ್ಕೆಯಾಗಿದ್ದರೆ, ಉಪ್ಪೇನಾ ಅತ್ಯುತ್ತಮ ತೆಲುಗು ಚಿತ್ರವೆಂದು ಆಯ್ಕೆಯಾಗಿದೆ. ಮಲಯಾಳಂ ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ʼಹೋಮ್ʼ ಚಿತ್ರ ಭಾಜನವಾಗಿದೆ.
‘ಗಂಗೂಬಾಯಿ ಕಥಿವಾಡಿ’ ಮತ್ತು ‘ಮಿಮಿ’ ಚಿತ್ರದ ನಟನೆಗಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ನಟನೆಗೆ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿಯನ್ನು ಗೆದ್ದಿದೆ. ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಯನ್ನು ಆರ್ಆರ್ಆರ್ ಪಡೆದಿದ್ದು, ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ನರ್ಗೀಸ್ ದತ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಎಸ್ಎಸ್ ರಾಜಮೌಳಿಯವರ RRR ಚಿತ್ರ ಅತ್ಯುತ್ತಮ ಸಾಹಸ ನಿರ್ದೇಶನ, ನೃತ್ಯ ಸಂಯೋಜನೆ ಮತ್ತು ವಿಶೇಷ ಪರಿಣಾಮಗಳಿಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.