
ಬೆಂಗಳೂರು: ಭಾರತ ಸರ್ಕಾರ ಸುಸ್ಥಿರ ಅಭಿವೃದ್ಧಿ ಸಾಧನೆಗೆ ನೀಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ ಪುರಸ್ಕಾರ(Deen Dayal Upadhyaya Panchayat Successive Development Award) ಕ್ಕೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಗಾಳಿಬೀಡು(Galibeedu) ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದಿದೆ.

ಉಡುಪಿ ಪಂಚಾಯಿತಿ ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ(Nanaji Deshmukh Sarvotham Panchayat Continuous Development Award) ದಲ್ಲಿ ತೃತೀಯ ಬಹುಮಾನ ಪಡೆದಿದೆ.ಈ ಪ್ರಶಸ್ತಿಗಳಿಂದ ಗಾಳಿಬೀಡು ಪಂಚಾಯಿತಿಗೆ 1 ಕೋಟಿ ರೂ. ಉಡುಪಿ ಪಂಚಾಯಿತಿಗೆ 2 ಕೋಟಿ ರೂ. ಬಹುಮಾನ ದೊರೆಯಲಿದೆ.

ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ‘ಗಾಳಿಬೀಡು’ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದಿದ್ದು, ‘ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ವಿಕಾಸ ಪುರಸ್ಕಾರ’ಕ್ಕೆ ಭಾಜನವಾಗಿದೆ.

ಕೇಂದ್ರ ಸರ್ಕಾರವು ದೇಶದಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 9 ವಿಷಯಾಧಾರಿತಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ. (9 ವಿಷಯಗಳು – ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ಪಂಚಾಯತ್, ಆರೋಗ್ಯಕರ ಪಂಚಾಯತ್, ಮಕ್ಕಳ ಸ್ನೇಹಿ ಪಂಚಾಯತ್, ಸಾಕಷ್ಟು ನೀರು ಹೊಂದಿರುವ ಪಂಚಾಯತ್, ಸ್ವಚ್ಛ ಮತ್ತು ಹಸಿರು ಪಂಚಾಯತ್, ಸ್ವಾವಲಂಬಿ ಮೂಲ ಸೌಕರ್ಯ ಹೊಂದಿರುವ ಪಂಚಾಯತ್, ಸಾಮಾಜಿಕ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತ ಹೊಂದಿರುವ ಪಂಚಾಯತ್ ಹಾಗೂ ಮಹಿಳಾ ಸ್ನೇಹಿ ಪಂಚಾಯತ್).







ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿಹಂಚಿಕೊಂಡಿದ್ದು, “ರಾಜ್ಯ ಮಟ್ಟದ ಸಮಿತಿಯು ಪ್ರಥಮಮೂರು ಗ್ರಾಮ ಪಂಚಾಯಿತಿಗಳನ್ನು ಪರಶೀಲಿಸಿ ರಾಜ್ಯಮಟ್ಟದಿಂದ ವಿಷಯವಾರು ಪ್ರಥಮ ಸ್ಥಾನ ಪಡೆದ ಗ್ರಾಮಪಂಚಾಯಿತಿಯನ್ನು ರಾಷ್ಟ್ರ ಮಟ್ಟಕ್ಕೆ ಶಿಫಾರಸ್ಸುಮಾಡಲಾಗುತ್ತದೆ.ರಾಷ್ಟ್ರ ಮಟ್ಟದಲ್ಲಿ ವಿಷಯವಾರುಪಂಚಾಯಿತಿಗಳು ರಾಷ್ಟ್ರ ಮಟ್ಟದ ಸಮಿತಿಯು ಆಯ್ಕೆಮಾಡುತ್ತದೆ.ಸರಿ ಸುಮಾರು 2.5 ಲಕ್ಷ ಗ್ರಾಮಪಂಚಾಯಿತಿಗಳ ಪೈಕಿ ಕೊಡಗು ಜಿಲ್ಲೆಯ ಮಡಿಕೇರಿತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿಯುಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿವಿಷಯದಲ್ಲಿ ‘ದೀನ್ ದಯಾಳ್ ಉಪಾಧ್ಯಾಯ್ಪಂಚಾಯತ್ ಸತತ ವಿಕಾಸ ಪುರಸ್ಕಾರ’ ಪ್ರಥಮಸ್ಥಾನಗಳಿಸಿರುತ್ತದೆ. ಅಲ್ಲದೇ 9 ವಿಷಯಗಳಲ್ಲಿ ತನ್ನವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಸರ್ವೋತ್ತಮಸಾಧನೆಗಾಗಿ ಉಡುಪಿ ಜಿಲ್ಲಾ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ‘ನಾನಾಜೀ ದೇಶಮುಖ್ ಸರ್ವೋತ್ತಮಪಂಚಾಯತ್ ಸತತ ವಿಕಾಸ ಪುರಸ್ಕಾರ’ದಡಿ ತೃತೀಯಸ್ಥಾನಗಳಿಸಿರುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಿಸಂತೋಷ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ಕೇಂದ್ರದ ಮಟ್ಟದ ಸಮಿತಿಗಳು ಮೌಲ್ಯಮಾಪನ ಮಾಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪ್ರಥಮ ಮೂರು ಸ್ಥಾನಗೊಳಿಸಿದ ಪಂಚಾಯಿತಿಗಳನ್ನು ಆಯ್ಕೆ ಮಾಡಿ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ’ವನ್ನು ನೀಡಲಾಗುತ್ತದೆ.
ಹಾಗೆಯೇ 9 ವಿಷಯಾಧಾರಿತ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಎಲ್ಲ ವಿಷಯಗಳ ಒಟ್ಟಾರೆ ಸರಾಸರಿ ಸಾಧನೆ ಮಾಡಿದ ಪಂಚಾಯಿತಿಗಳಿಗೆ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ ನೀಡಲಾಗುತ್ತದೆ.