ಬುಧವಾರ ಲೋಕಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ನವರು ಎಂದೂ ಕೃಷಿ ಕಾಯ್ದೆಗಳಲ್ಲಿನ ಅಂಶಗಳ ಕುರಿತು ಚರ್ಚೆಯನ್ನೇ ನಡೆಸಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರವಾಗಿ ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, ಇಂದು ಕೃಷಿ ಕಾನೂನುಗಳಲ್ಲಿನ ಅಂಶಗಳ ಕುರಿತು ಚರ್ಚೆ ನಡೆಸುತ್ತೇವೆ, ಇದರಿಂದ ಪ್ರಧಾನಿಯವರಿಗೆ ಸ್ವಲ್ಪ ಖುಶಿಯಾಗಲಿ ಎಂದು ವ್ಯಂಗ್ಯವಾಡಿದ್ದಾರೆ.
ನಂತರ ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸಿದ ರಾಹುಲ್ ಗಾಂಧಿ ಅವರು, ಮೊದಲ ಕಾನೂನು ದೇಶದಲ್ಲಿ ಈಗಾಗಲೇ ಇರುವಂತಹ ʼಮಂಡಿʼ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುತ್ತದೆ. ದೇಶದ ಯಾವ ಮೂಲೆಯಲ್ಲಿಯೂ ಯಾರು ಬೇಕಾದರೂ ಅನಿಯಮಿತ ಆಹಾರ ಧಾನ್ಯ, ತರಕಾರಿ ಅಥವಾ ಹಣ್ಣುಗಳನ್ನು ಖರೀದಿ ಮಾಡಬಹುದು. ಹೀಗೆ ಮಾಡಿದರೆ, ಯಾವರು ಸರ್ಕಾರಿ ಸ್ಥಾಪಿತ ಮಾರುಕಟ್ಟೆಗಳಿಗೆ ಹೋಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎರಡನೇ ಕಾಯ್ದೆಯು ದೇಶದಲ್ಲಿರುವ ಅಗತ್ಯ ಸರಕುಗಳ ಕಾಯ್ದೆಯನ್ನು ನಿರ್ಮೂಲನೆ ಮಾಡುತ್ತದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳು ಅನಿಯಮಿತವಾಗಿ ಆಹಾರ ಧಾನ್ಯ ಅಥವಾ ತರಕಾರಿಗಳನ್ನು ಶೇಖರಣೆ ಮಾಡಲು ಅನುವು ಮಾಡಿಕೊಡುತ್ತದೆ, ಎಂದಿದ್ದಾರೆ.ರೈತರು ಬೇಡ ಎನ್ನುತ್ತಿರುವ ಆ ಮೂರು ಮರಣಶಾಸನಗಳ ವಿವರ
“ಹಿಂದೆ ಕುಟುಂಬ ನಿಯಂತ್ರಣದ ಸೂತ್ರ ʼನಾವಿಬ್ಬರು ನಮಗಿಬ್ಬರುʼ ಎಂದಿತ್ತು. ಈಗ ಅದೇ ಸೂತ್ರ ಕೇಂದ್ರ ಸರ್ಕಾರಕ್ಕೂ ಅನ್ವಯವಾಗುತ್ತದೆ. ದೇಶವನ್ನು ನಾಲ್ಕು ಜನ ನಡೆಸುತ್ತಾ ಇದ್ದಾರೆ. “ಅವರಿಬ್ಬರು, ಅವರಿಗಿಬ್ಬರು” ಎಂಬತಾಗಿದೆ ಪರಿಸ್ಥಿತಿ. ಅವರ ಹೆಸರು ಎಲ್ಲರಿಗೂ ಗೊತ್ತಿದೆ,” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ನಂತರ ತಮ್ಮ ವಾಗ್ದಾಳಿ ಮುಂದುವರೆಸಿದ ರಾಹುಲ್ ಅವರು, ಕೇಂದ್ರ ಸರ್ಕಾರ ಈ ಕಾನೂನುಗಳನ್ನು ವಾಪಾಸ್ ಪಡೆಯಲೇಬೇಕು. ಇಲ್ಲವಾದರೆ ಈ ದೇಶದ ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಬಗ್ಗುವುದಿಲ್ಲ, ಎಂದು ಎಚ್ಚರಿಸಿದ್ದಾರೆ.