![](https://pratidhvani.com/wp-content/uploads/2025/02/WhatsApp-Image-2025-02-07-at-12.00.24-PM-1024x682.jpeg)
ಮೂವರು ಯುವಕರು ಹಾಗೂ ಇಬ್ಬರು ಯುವತಿಯರ ನಡುವಿನ ಹುಡುಗಾಟ, ತುಂಟಾಟದ ಸುತ್ತ ನಡೆಯುವ ಕಥೆ ಹೊಂದಿದ ಚಿತ್ರ “ಇಂಟರ್ ವೆಲ್” ಮಾರ್ಚ್ ೭ರಂದು ತೆರೆಕಾಣಲಿದೆ.
ಭರತವಷ್೯ ಪಿಚ್ಚರ್ಸ್ ಮೂಲಕ ಭರತವರ್ಷ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಚಿತ್ರದ ಹಾಡು ಹಾಗೂ ಟ್ರೈಲರ್ ಲಾಂಚ್ ಮಾತನಾಡುತ್ತ ಇಂಟರ್ ವೆಲ್ ಹೆಸರೇ ಒಂಥರಾ ಇಂಟರೆಸ್ಟಿಂಗ್ ಆಗಿದೆ. ಇದರ ಹಾಡು, ಟ್ರೈಲರ್ ನಿಜಕ್ಕೂ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ಈಗಿನ ಕಾಲದ ಯಂಗ್ ಸ್ಟರ್ಸ್ಗೆ ಏನು ಬೇಕೋ ಅದೆಲ್ಲವನ್ನೂ ನಿರ್ದೇಶಕರು ಚೆನ್ಬಾಗಿ ತೆರೆಮೇಲೆ ಮೂಡಿಸಿದ್ದಾರೆ ಎಂದು ಮೆಚ್ಚಿಕೊಂಡರು.
![](https://pratidhvani.com/wp-content/uploads/2025/02/WhatsApp-Image-2025-02-07-at-12.00.25-PM-1-1024x682.jpeg)
ನಂತರ ಮಾತನಾಡಿದ ನಿರ್ಮಾಪಕ ನಿರ್ದೇಶಕ ಭರತ್ ಈಗಿನ ಕಾಲದ ಯೂಥ್ ಬೇಸ್ ಮಾಡಿಕೊಂಡು ಹೆಣೆದ ಕಥೆ. ಇಡೀ ಚಿತ್ರ ಯೂಥ್ ಫುಲ್ ಆಗಿದೆ. ಪ್ರತಿಯೊಬ್ಬರ ಲೈಫ್ ನಲ್ಲಿ ಇಂಟರ್ವೆಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಲೈಫ್ ನಲ್ಲಿ ಆದ ಇಂಟರ್ ವೆಲ್ ಏನೇನೆಲ್ಲ ಮಾಡಿತು ಅನ್ನೋದೇ ಈ ಚಿತ್ರದ ಕಥಾಹಂದರ. ವಿಶೇಷವಾಗಿ ಚಿತ್ರದ ಕ್ಕೈಮ್ಯಾಕ್ಸ್ ಅದ್ಭುತವಾಗಿದೆ. ಅದಲ್ಲೂ ಕೊನೇ ಹತ್ತು ನಿಮಿಷ ಗಮನ ಸೆಳೆಯುತ್ತದೆ. ಅದನ್ನು ರೈನ್ ಎಫೆಕ್ಟ್ ನಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಈ ಚಿತ್ರದಲ್ಲಿ ಪ್ರಥಮಬಾರಿಗೆ ನಟಿಸಿರುವ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.
![](https://pratidhvani.com/wp-content/uploads/2025/02/WhatsApp-Image-2025-02-07-at-12.00.24-PM-1-1024x682.jpeg)
ಈಗಾಗಲೆ ಬಪ್ಪ ಬಪ್ಪ ಮೋರಿಯ, ಎನೊ ಶುರವಾಗಿದೆ ಎಂಬ ಹಾಡು ವೈರಲ್ ಆಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಸುಕೇಶ್ ಅವರದು. ಛಾಯಾಗ್ರಹಣ ರಾಜ್ ಕಾಂತ್. ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ. ಶಶಿಧರ್ ರವರ ಸಂಕಲನ. ಸುಕೇಶ್, ಭರತ್ ಚಿತ್ರದ ನಿರ್ಮಾಪಕರು. ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ,ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮೂವರು ಹಳ್ಳಿ ಹುಡುಗರ ತುಂಟತನ ಹಾಗೂ ಪ್ರೇಮಕಥೆಯನ್ನು ಹಾಸ್ಯಮಯವಾಗಿ ನಿರೂಪಿಸಿರುವ ಚಿತ್ರವಿದು.