
ವಾಘಾಚಿಪಾಣಿ ಎಂಬ ಕನ್ನಡ ಚಲನಚಿತ್ರ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಆ ಮೂಲಕ ಕನ್ನಡ ಸಿನಿಮಾವೊಂದು ಬರ್ಲಿನ್ ಚಿತ್ರೋತ್ಸವಕ್ಕೆ ಕನ್ನಡದಿಂದ ಆಯ್ಕೆಯಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದ್ರೆ ಈ ರೀತಿಯ ಸಿನೆಮಾಗಳಿಗೆ ರಾಜ್ಯ ಸರ್ಕಾರದಿಂದ ಸಿಕ್ಕಿರುವ ಪ್ರೋತ್ಸಾಹ ಏನು ಎಂಬುದರ ಬಗ್ಗೆ ಈಗ ಚರ್ಚೆಗಳು ವ್ಯಾಪಕವಾಗಿದೆ. ಈ ಬಗ್ಗೆ ಸಿನಿಮಾ ನಿರ್ದೇಶಕ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.

ಕಳೆದ ಒಂದು ದಶಕದಿಂದ ಕನ್ನಡದ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಮನ ಸೆಳೆದಿದೆ.
ತಿಥಿ, ಅತ್ತಿಹಣ್ಣು ಮತ್ತು ಕಣಜ, ಬಳೆಕೆಂಪ, ಹರಿವು, ಹರಿಕಥಾ ಪ್ರಸಂಗ, ಪಿಂಕಿ ಎಲ್ಲಿ, ಪೆದ್ರೊ, ಶಿವಮ್ಮ, ಫೋಟೊ, ನೀಲಿಹಕ್ಕಿ, ಮಿಥ್ಯ ಹಾಗೂ ಇತರ ಚಿತ್ರಗಳು Locarno Busan Shangai Beijing ಚಿತ್ರೋತ್ಸವದಿಂದ ಪ್ರಶಂಸೆ ಪಡೆದಿವೆ. ಆದರೆ ಈ ಚಿತ್ರಗಳಿಗೆ ಸಿಗಬೇಕಾದ state support ಸಿಕ್ಕಿದೆಯೆ? ಒಂದು ಪ್ರಶಂಸೆಯ ಪತ್ರವಾದರೂ ತಲುಪಿದೆಯೆ ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಾನು ನನ್ನ ತಂಡದ ಜೊತೆಗೆ ಚಿತ್ರೋತ್ಸವದಲ್ಲಿ ಭಾಗವಹಿಸಲಾಗಲಿ, ಕನ್ನಡ ಸಿನಿಮಾವನ್ನು ಪಸರಿಸಲಾಗಲಿ ಕರ್ನಾಟಕ ಸರ್ಕಾರ ಯಾವುದೇ ಸಹಕಾರ ನೀಡದಿರುವುದು ಖೇದಕರ ಎಂದು ನಟೇಶ್ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಮೊದಲ ಚಿತ್ರ ಪೆದ್ರೊ ಬೆಂಗಳೂರಿನ ಚಿತ್ರೋತ್ಸವದಿಂದ ದೂರ ಇಡಲ್ಪಟ್ಟು ಇಂದಿಗೂ ಕನ್ನಡದ ಪ್ರೇಕ್ಷಕರ ‘ನಾವು ಈ ಸಿನಿಮಾ ಎಲ್ಲಿ ನೋಡುವುದು’ ಎಂಬ ಪ್ರಶ್ನೆಗೆ ಉತ್ತರಿಸಲಾಗಿದೆ ಒದ್ದಾಡಿದ್ದೇನೆ. ಮೇಲೆ ಹೆಸರಿಸಿದ ಚಿತ್ರಗಳು ನಮ್ಮ ನಾಡಿನಲ್ಲಿ ನೆಲೆ ಕಾಣಲು ಸಾಧ್ಯವಿಲ್ಲದೆ ಒದ್ದಾಡಿವೆ. ಈ ತಾತ್ಸಾರಕ್ಕೆ ಕಾರಣ ತಿಳಿದಿಲ್ಲ ಎಂದು ನಿರ್ದೇಶಕ ನಟೇಶ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

Cannes, Venice, Berlin ಮತ್ತಿತರ ಚಿತ್ರೋತ್ಸವಗಳಿಗೆ ‘official invitation’ ಪಡೆದು ಹೋಗುವದಕ್ಕೆ ಮತ್ತು ಅಕಾಡೆಮಿಯ ಪರವಾಗಿ ಹೋಗಿ Indian Pavilion ನಲ್ಲಿ ಕುಳಿತು ಚಹಾ ಕೂಟ ಮಾಡಿ ಬರುವುದಕ್ಕೆ ಬಹಳ ಅಂತರವಿದೆ.ನಿಮ್ಮ ಅಮೂಲ್ಯ ಸಮಯವನ್ನು ಸದರಿ ಸಿನಿಮಾಗಳ ಕಡೆ ಸೆಳೆದಿದ್ದಕ್ಕೆ ಕ್ಷಮೆಯಿರಲಿ ಎಂದು ಮಾರ್ಮಿಕವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ನಿರ್ದೇಶಕ ನಟೇಶ್ ಹೆಗಡೆ ತಮ್ಮ ಸಿನಿಮಾಗೆ ಪ್ರೋತ್ಸಾಹಿಸುವಂತೆ ಆಗ್ರಹಿಸಿದ್ದಾರೆ.