ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಟ್ವಿಟರ್ನಲ್ಲಿ ಹಾಕಿರುವ ಪೋಸ್ಟ್ವೊಂದು ಭಾರೀ ವಿವಾದಕ್ಕೀಡಾಗಿದೆ. ಭಾರತೀಯ ಮೂಲದ ಇಂಟರ್ನಿ ಪ್ರತಿಮಾ ರಾಯ್ ಎಂಬುವರು ಹಿಂದೂ ದೇವರುಗಳೊಂದಿಗೆ ತೆಗೆಸಿಕೊಂಡ ಫೋಟೋ ಒಳಗೊಂಡ ಪೋಸ್ಟ್ ಇದಾಗಿದೆ. ಹಾಗಾಗಿ ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನಾಸಾ ಹಾಕಿದ ಪೋಸ್ಟ್ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ನಾಸಾ ಸಂಸ್ಥೆಯಲ್ಲಿ ಇಂಟರ್ನ್ಶೀಪ್ಗಾಗಿ ನಾಲ್ವರು ಇಂಜಿನಿಯರ್ಸ್ ಅರ್ಜಿ ಸಲ್ಲಿಸಿದ್ದರು. ಇವರು ಆಯ್ಕೆ ಮಾಡಿದ ನಾಸಾ ನಾಲ್ವರು ಇಂಜಿನಿಯರ್ಸ್ ಫೋಟೋಗಳನ್ನು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿತ್ತು. ಈ ಟ್ವೀಟ್ನಲ್ಲಿ 4 ಇಂಟರ್ನಿಗಳ ಪೈಕಿ ಪ್ರತಿಮಾ ರಾಯ್ ಫೋಟೋ ಕೂಡ ಇತ್ತು. ಭಾರತ ಮೂಲದ ಪ್ರತಿಮಾ ರಾಯ್ ದೇವರೊಂದಿಗೆ ಕ್ಲಿಕ್ಕಿಸಿದ ಫೋಟೋ ಇದಾಗಿತ್ತು.

ನಾಸಾ ಪೋಸ್ಟ್ ಮಾಡಿರುವ ಈ ಫೋಟೋಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಾಸಾ ಸಂಸ್ಥೆಯನ್ನು ನಾಶಪಡಿಸಲು ಎಂದು ಈ ಫೋಟೋ ಹಾಕಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಾಸಾ ಯಾಕೇ ತಾನೋರ್ವ ಹೆಮ್ಮೆಯ ಹಿಂದೂ ಎಂದು ಹೇಳಿಕೊಳ್ಳುವ ಫೋಟೋ ಪೋಸ್ಟ್ ಮಾಡಬೇಕು. ದೇವರಿಗೂ ವಿಜ್ಞಾನಕ್ಕೂ ಏನು ಸಂಬಂಧವೇನು? ಪ್ರತಿಮಾ ರಾಯ್ ಹಿಂದೂ ದೇವತೆಗಳೊಂದಿಗೆ ಫೋಟೋ ಕ್ಲಿಕ್ಕಿಸಿ ನಾಸಾಗೆ ನೀಡುವ ಉದ್ದೇಶವಾದರೂ ಏನಿತ್ತು? ಎಂದು ಟೀಕಿಸಿದ್ದಾರೆ. ಈ ಮೂಲಕ ನಾಸಾದ ವೈಜ್ಞಾನಿಕ ಚಿಂತನೆಯನ್ನು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ತನ್ನಿಷ್ಟದ ಧರ್ಮ ಮತ್ತು ದೇವರನ್ನು ನಂಬುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಪ್ರತಿಮಾ ಪರ ಕೆಲವರು ಟ್ವೀಟ್ ಮಾಡಿದ್ದಾರೆ. ನಾಸಾ ಒಂದು ವೇಳೆ ಮುಸ್ಲಿಂ ಅಥವಾ ಕ್ರೈಸ್ತರ ಫೋಟೋ ಹಾಕಿದ್ದರೇ ಈ ಲಿಬರಲ್ಸ್ ಹೀಗೆ ವಿರೋಧ ವ್ಯಕ್ತಪಡಿಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಮೂಲದ ಪ್ರತಿಮಾ ರಾಯ್ ಮತ್ತು ಪೂಜಾ ರಾಯ್ ಇಬ್ಬರೂ ಅಕ್ಕ ತಂಗಿಯರು. ಇವರು ನಾಸಾ ಗ್ಲೆನ್ ರೀಸರ್ಚ್ ಸೆಂಟರ್ನಲ್ಲಿ ಇಂಟರ್ನ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಈ ಕುರಿತು ಮಾತಾಡಿರುವ ಪ್ರತಿಮಾ, ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ಎಲ್ಲಾ ಸಾಧನೆಗೂ ನಾನು ನಂಬುವ ಧರ್ಮ ಮತ್ತು ದೇವರೆ ಸ್ಫೂರ್ತಿ ಎಂದಿದ್ದಾರೆ.