ಕಳೆದ ಜೂನ್‌ನಿಂದ (June) ಅಂತರಿಕ್ಷ ಕೇಂದ್ರದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita williams) ಮತ್ತು ಬುಚ್ ವಿಕ್ಟೋರ್ (Buch wilmore) ರನ್ನ ಸುರಕ್ಷಿತವಾಗಿ ಕರೆತರಲು ನಾಸಾ ಮುಂದಾಗಿದೆ. 4 ದಿನ ಅಧ್ಯಯನ ಮುಗಿಸಿ ಬರಬೇಕಿದ್ದ ಗಗನಯಾನಿಗಳು ತಾಂತ್ರಿಕ ದೋಷದ ಕಾರಣ 3 ತಿಂಗಳಿಂದ ISS ನಲ್ಲೇ ದಿನದೂಡುತ್ತಿದ್ದಾರೆ.
ಹೀಗಾಗಿ ಇನ್ನೂ ಕೂಡ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಅಲ್ಲೇ ಸಿಲುಕಿದ್ದಾರೆ. ಅವರನ್ನ ಮರಳಿ ಕರೆತರಲು ಇಬ್ಬರು ಗಗನಯಾತ್ರಿಗಳು ಮತ್ತು ಎರಡು ಖಾಲಿ ಅಸನಗಳು ಇರುವ ಸ್ಪೇಸ್ ಎಕ್ಸ್ (SpaceX) ಮಿಷನ್ ವೋಮ ನೌಕೆಯೊಂದಿಗೆ ಫ್ಲೋರಿಡಾದಿಂದ (Florida) ಪ್ರಯಾಣ ಬೆಳೆಸಿದ್ದಾರೆ.
ಈ ಗಗನಯಾನಿಗಳು ಸುಮಾರು 5-6 ತಿಂಗಳು ಅಂತರಿಕ್ಷದಲ್ಲಿ ಇರಲಿದ್ದು, ಫೆಬ್ರವರಿಯಲ್ಲಿ ಸುನಿತಾ ಮತ್ತು ಬುಚ್‌ರನ್ನು 2 ಖಾಲಿ ಆಸನದಲ್ಲಿ ಕೂರಿಸಿಕೊಂಡು ಭೂಮಿಗೆ ಮರಳಲಿದ್ದಾರೆ. ಇಬ್ಬರೂ ಗಗನಯಾನಿಗಳು ಸುರಕ್ಷಿತವಾಗಿ ಮರಳಲಿ ಎಂದು ಇಡೀ ವಿಶ್ವದಾದ್ಯಂತ ಪ್ರಾರ್ಥನೆಗಳು ಮೊಳಗಿವೆ.