ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಪ್ರಧಾನಿ ಮೋದಿ ಮೇ 6 ಹಾಗೂ 7ರಂದು ಬೃಹತ್ ರೋಡ್ ಶೋ ನಡೆಸಲಿದ್ದು ಇದಕ್ಕಾಗಿ ಈಗಾಗಲೇ ಮಾರ್ಗಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಇದರಿಂದ ಬೀದಿ ನಾಯಿಗಳಿಗೆ ಸಂಕಷ್ಟ ಆರಂಭಗೊಂಡಿದೆ.

ಬೆಂಗಳೂರಿನ ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಬೀದಿನಾಯಿಗಳನ್ನು ಬಂಧಿಸುವಂತೆ ಬಿಬಿಎಂಪಿಗೆ ಕೋಣನಕುಂಟೆ ಇನ್ಸ್ಪೆಕ್ಟರ್ ಪತ್ರ ಬರೆದಿದ್ದಾರೆ. ನಾಯಿಗಳ ಜೊತೆಯಲ್ಲಿ ಹಾವು, ಜೇನು, ಕೋತಿ ಹೀಗೆ ಪ್ರತಿಯೊಂದು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಹೆಲಿಪ್ಯಾಡ್ನಿಂದ ಇಳಿದು ರೋಡ್ ಶೋದವರೆಗೂ ಮಾರ್ಗದಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಬಾರದು ಹಾಗೂ ಎಲ್ಲಿಯೂ ಅಡಚಣೆಗಳು ಕಂಡು ಬರಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಕೂಡ ಹೈ ಅಲರ್ಟ್ ಆಗಿದೆ ಎನ್ನಲಾಗಿದೆ.