Important
2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ.
ಇಂದು ಶಿವಮೊಗ್ಗಗೆ ಆಗಮಿಸಿದ್ದ ನರೇಂದ್ರ ಮೋದಿ.
ನರೇಂದ್ರ ಮೋದಿ ಆಗಮನದಲ್ಲೂ ಪಕ್ಷಕ್ಕೆ ಮುಜುಗರ ತಂದ ಕೆ.ಎಸ್. ಈಶ್ವರಪ್ಪ.
ಕೆ.ಎಸ್.ಈಶ್ವರಪ್ಪ. ಮಾಜಿ ಉಪ-ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ.

ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಬಾರದೇ ಪಕ್ಷಕ್ಕೆ ಮುಜುಗರ ತಂದ ಈಶ್ವರಪ್ಪ.
ಅಷ್ಟಕ್ಕೂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಮನವೊಲಿಕೆಗೆ ಎಷ್ಟೇ ಪ್ರಯತ್ನಪಟ್ರೂ ಪಟ್ಟು ಸಡಿಲಿಸದ ಈಶ್ವರಪ್ಪ.
ಟಿಕೆಟ್ ವಿಚಾರದಲ್ಲಿ ನನ್ನ ಪಾತ್ರವೇನು ಇಲ್ಲ ಎಂದಿರುವ ಬಿ. ಎಸ್.ಯಡಿಯೂರಪ್ಪ.
ಯಡಿಯೂರಪ್ಪರ ಹೇಳಿದ್ರೂ ಸರಿಯಾಗಿ ನಡೆದುಕೊಳ್ಳದೇ ಎಡವಟ್ಟು ಮಾಡಿಕೊಂಡ್ರಾ ಈಶ್ವರಪ್ಪ?
ಹೌದು ಎನ್ನುತ್ತಿದೆ ಬಿಜೆಪಿಯ ಮೂಲಗಳು.

ಅಷ್ಟಕ್ಕೂ ಈಶ್ವರಪ್ಪರ ಪುತ್ರನ ಟಿಕೆಟ್ ವಿಚಾರದಲ್ಲಿ ದೆಹಲಿಯಲ್ಲಿ ಆಗಿದ್ದೇನು?
ಪ್ರತಿಧ್ವನಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಈಶ್ವರಪ್ಪರ ಪುತ್ರನಿಗೆ ಮಿಸ್ ಆಗಿರುವ ಬಗ್ಗೆ ಇಂಚಿಂಚೂ ಮಾಹಿತಿ ಲಭ್ಯ.
ಕಳೆದ ವಾರ ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿಯ ಚುನಾವಣಾ ಸಮಿತಿ ಸಭೆ.

ಸಭೆಗೂ ಮುನ್ನಾ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ.
ನಾನು ಈಶ್ವರಪ್ಪರನ್ನೇ ದೆಹಲಿಗೆ ಕರೆದುಕೊಂಡು ಹೋಗುತ್ತೇನೆ.
ಅವರು ಬರಲಿ, ಅಮಿತ್ ಶಾ ಅವರ ಮುಂದೆ ಕೂರಿಸಿ ಮಾತನ್ನಾಡುತ್ತೇನೆ ಎಂದಿದ್ದ ಯಡಿಯೂರಪ್ಪ.
ಟಿಕೆಟ್ ಘೋಷಣೆ ಮಾಡುವ ಸಂದರ್ಭದಲ್ಲಿ ದೆಹಲಿಗೆ ತೆರಳದೇ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿದ್ದ ಈಶ್ವರಪ್ಪ.
ಇನ್ನು ದೆಹಲಿಗೆ ಸಭೆಯ ವಿಚಾರವಾಗಿ ತೆರಳಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬಿ. ವೈ.ವಿಜಯೇಂದ್ರ.

ಎಲ್ಲರ ಬಳಿ ಸಮಾಲೋಚನೆ ಮಾಡಿ, ಸರ್ವೇ ವರದಿ ಮುಂದಿಟ್ಟುಕೊಂಡು, ಜಾತಿಯಾಧಾರದ ಮೇಲೆ ಟಿಕೆಟ್ ಘೋಷಿಸಿದ ಬಿಜೆಪಿ ಹೈಕಮಾಂಡ್.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ನಡೆದ ಸಭೆಯಲ್ಲಿ, ಚರ್ಚೆಗೆ ಬಂದಿದ್ದ ಈಶ್ವರಪ್ಪರ ಪುತ್ರನಿಗೆ ಎಂಬ ವಿಚಾರ.
ಆಗ ರಾಜ್ಯ ನಾಯಕರಿಗೆ ಪ್ರಶ್ನೆ ಮಾಡಿದ್ದ ಅಮಿತ್ ಶಾ.
ಅಮಿತ್ ಶಾ. ಕೇಂದ್ರ ಗೃಹ ಸಚಿವ.
ಈಶ್ವರಪ್ಪನವರು ಕುರುಬ ಸಮುದಾಯಕ್ಕೆ ಸೇರಿದವರು ಅಂತೀರಾ.

ಅವರ ಹಿಂದೆ ಅಷ್ಟೂ ಕುರುಬ ಸಮುದಾಯದ ಮತಗಳು ಕ್ರೂಢಿಕರಣ ಮಾಡುವ ಸಾಮರ್ಥ್ಯ ಇದೆಯೇ?
ಕುರುಬ ಸಮುದಾಯ ಇಂದು ರಾಜ್ಯದಲ್ಲಿ ಸಿದ್ಧರಾಮಯ್ಯರ ಪರವಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ನಮಗೆ ಕುರುಬ ಮತಗಳು ನಿಗದಿಯಾದಷ್ಟು ಚಲಾವಣೆ ಆಗಿಲ್ಲ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ

ಸಮುದಾಯದ ಮತಗಳನ್ನು ಕ್ರೂಢಿಕರಣ ಮಾಡುವುದರಲ್ಲಿ ಈಶ್ವರಪ್ಪ ಪಾತ್ರ ಅಷ್ಟಾಗಿ ಕಾಣಿಸುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಪ್ರಬಲ ವೀರಶೈವ-ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಹಾವೇರಿ-ಗದಗ ಕ್ಷೇತ್ರದಲ್ಲಿ ಈಶ್ವರಪ್ಪರ ಪುತ್ರನಿಗೆ ಟಿಕೆಟ್ ನೀಡಲು ಹೇಗೆ ಸಾಧ್ಯ?
ಹೀಗಾಗಿ, ವೀರಶೈವ-ಲಿಂಗಾಯತ ಸಮುದಾಯದ ನಾಯಕರಿಗೆ ಟಿಕೆಟ್ ಹಾವೇರಿ-ಗದಗ ಕ್ಷೇತ್ರದಿಂದ ಟಿಕೆಟ್ ನೀಡೋಣ ಎಂಬ ಮಾತನ್ನಾಡಿದ ಅಮಿತ್ ಶಾ.

ಅಮಿತ್ ಶಾ ಅವರ ಮಾತಿನ ಮೇರೆಗೆ ಬಸವರಾಜ ಬೊಮ್ಮಾಯಿ ಸೂಚಿಸಿದ ಯಡಿಯೂರಪ್ಪ ಅಂಡ್ ಟೀಂ.
ಕೊನೆಯದಾಗಿ ಹಾವೇರಿ-ಗದಗ ಕ್ಷೇತ್ರ ಬಸವರಾಜ ಬೊಮ್ಮಾಯಿ ಪಾಲು.
ಹೀಗೆ ನಡೆದಿರುವ ಚರ್ಚೆಯ ಬೆನ್ನಲ್ಲೇ ಈಶ್ವರಪ್ಪರ ಪುತ್ರನಿಗೆ ಟಿಕೆಟ್ ಮಿಸ್.