ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹುಟ್ಟಿರುವುದೇ ರಾಮಮಂದಿರ ನಿರ್ಮಿಸುವುದಕ್ಕೆ ಎಂದು ಆರ್.ಅಶೋಕ್ ತಿಳಿಸಿದ್ದು, ರಾಜ್ಯ ರಾಜಕಾರಣದಲ್ಲಿ ಈ ಹೇಳಿಕೆ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ.
ಆರ್.ಅಶೋಕ್ ಮಾತಿನ ಒಳಾರ್ಥವೇನು?
ಅಷ್ಟಕ್ಕೂ ಆರ್.ಅಶೋಕ್ ಹೇಳಿರುವ ವಿಚಾರವಾದ್ರೂ ಏನು ಅಂದರೆ, ಶತ ಶತಮಾನಗಳಿಂದ ಹಿಂದೂಗಳ ಕನಸಿನ ಕೂಸಾಗಿದ್ದ, ಅಯೋಧ್ಯೆಯ ರಾಮಮಂದಿರ ನಿರ್ಮಾಣ ಈಗ ಸಾಕಾರವಾಗಿದೆ. 1528 ರಲ್ಲಿ ಬಾಬರ್ ಎಂಬ ರಾಜ ರಾಮಮಂದಿರ ಧ್ವಂಸ ಮಾಡಿದ್ದು, ಅಂದಿನಿಂದ ಲಕ್ಷಾಂತರ ಹಿಂದೂಗಳು, ಇದೇ ಸ್ಥಳದಲ್ಲಿ ರಾಮನ ಮಂದಿರ ನಿರ್ಮಿಸುವುದಕ್ಕೆ ಹರಸಾಹಸಪಡುತ್ತಿದ್ರು. ಆ ಕನಸು ಇದೀಗ ನನಸಾಗಿದ್ದು, ನರೇಂದ್ರ ಮೋದಿ ಇದನ್ನು ಸಾಕಾರಗೊಳಿಸಿದ್ದಾರೆ. ಶತ ಶತಮಾನಗಳಿಂದಲೂ ಆಗದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ 9 ವರ್ಷಗಳಲ್ಲಿ ಮಾಡಿದ್ದಾರೆ.
ಅಂದರೆ ಇದರರ್ಥ ಏನು? ನರೇಂದ್ರ ಮೋದಿ ಅವರು ಹುಟ್ಟಿರುವುದೇ ರಾಮಮಂದಿರ ನಿರ್ಮಿಸುವುದಕ್ಕೆ ಎಂದಲ್ಲವೇ? ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.