
ನಾಪೋಕ್ಲು:ಗಂಭೀರ ಗಾಯಗೊಂಡಿದ್ದ ಅತ್ತೆ ಐಸಮ್ಮ (65) ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಆಸ್ಪತ್ರೆಯಲ್ಲಿ ನಿಧನ. ಕಳೆದ ಶುಕ್ರವಾರ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದ ಘಟನೆ.
ಕುಟುಂಬ ಕಲಹದ ಹಿನ್ನೆಲೆ ಐಸಮ್ಮ ಅವರ ಮಗಳ ಗಂಡ ಮಡಿಕೇರಿ ನಿವಾಸಿ ಹಾರಿಸ್ ಎಂಬಾತನಿಂದ ನಡೆದ ಕೃತ್ಯ. ಶುಕ್ರವಾರ ಮಧ್ಯರಾತ್ರಿ ಅಯ್ಯಂಗೇರಿಯಲ್ಲಿರುವ ಅತ್ತೆ ಮನೆಯ ಬೀಗ ಹೊಡೆದು ಹೊಳ ನುಗ್ಗಿ ಅತ್ತೆ ಐಸಮ್ಮ ಹಾಗೂ ಸಂಬಂಧಿ ಕದೀಜ ಎಂಬುವವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಳಿಯ ಹಾರಿಸ್.
ಕೃತ್ಯದಿಂದ ಗಂಭೀರ ಗಾಯಗೊಂಡಿದ್ದ ಅತ್ತೆ ಐಸಮ್ಮ ಹಾಗೂ ಕದೀಜ ಎಂಬುವವರು ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ಐಸಮ್ಮ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಗಾಯಗೊಂಡಿದ್ದ ಸಂಬಂದಿ ಮಹಿಳೆ ಕೃತ್ಯದಿಂದ ಕೈಬೆರಳು ಕಳೆದುಕೊಂಡಿದ್ದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯ ನಡೆಸಿ ಆಟೋದೊಂದಿಗೆ ಪರಾರಿಯಾಗಲು ಯತ್ನಿಸುವ ಸಂರ್ಭ ಆಟೋ ಅವಘಡಕ್ಕೀಡಾಗಿ ಗಾಯಗೊಂಡಿದ್ದ ಆರೋಪಿ ಹಾರಿಸ್ ನನ್ನು ನಾಪೋಕ್ಲು ಬಳಿಯ ಹೊದ್ದೂರು ಗ್ರಾಮದಲ್ಲಿ ನಾಪೋಕ್ಲು ಪೊಲೀಸರು ವಶಕ್ಕೆಪಡೆದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ಪ್ರಕರಣ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.