
ರಿಯಾಧ್: ಗೋಲನ್ ಹೈಟ್ಸ್ನಲ್ಲಿ ಜನವಸತಿ ವಸಾಹತುಗಳನ್ನು ವಿಸ್ತರಿಸುವ ಇಸ್ರೇಲ್ ಯೋಜನೆ ವಿರುದ್ಧ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಮತ್ತು ಕತಾರ್ ತೀವ್ರ ವಿರೋಧ ವ್ಯಕ್ತಪಡಿಸಿವೆ.ಇಸ್ರೇಲ್ ಈ ನಿರ್ಧಾರವು ಸಿರಿಯಾದ ಭದ್ರತೆ ಮತ್ತು ಸ್ಥಿರತೆಯನ್ನು ಹಾಳು ಮಾಡುವಂತದ್ದು ಎಂದು ಸೌದಿ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.

ಸದ್ಯದ ಕ್ರಮವು ಸಿರಿಯಾದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ಸೌದಿ ಖಂಡನೆ ವ್ಯಕ್ತಪಡಿಸಿದೆ.
ಯುಎಇನ ಎಚ್ಚರಿಕೆ: “ಸಿರಿಯಾದ ಸಾರ್ವಭೌಮತ್ವವನ್ನು ಗೌರವಿಸುವುದು ಮತ್ತು ಆಕ್ರಮಿತ ಗೋಲನ್ ಹೈಟ್ಸ್ನ ಕಾನೂನಾತ್ಮಕ ಸ್ಥಿತಿಯನ್ನು ಬದಲಾಯಿಸಲು ಇಸ್ರೇಲ್ ಕೈಗೊಂಡ ಯಾವುದೇ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ,” ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ.ಇಸ್ರೇಲ್ ಕ್ರಮಗಳು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎಂಬ ಎಚ್ಚರಿಕೆಯನ್ನು ಅದು ನೀಡಿದೆ.
ಇಸ್ರೇಲ್ನ ಆಕ್ರಮಣಗಳು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿವೆ.ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸಲು ಇಸ್ರೇಲ್ ಮೇಲೆ ಒತ್ತಡ ಹೇರಬೇಕಾಗಿದೆ,” ಎಂದು ಕತಾರ್ ವಿದೇಶಾಂಗ ಇಲಾಖೆ ಹೇಳಿದೆ.ಇದೇ ವೇಳೆ, ಇಸ್ರೇಲ್ ಸರ್ಕಾರ ಗೋಲನ್ ಹೈಟ್ಸ್ನಲ್ಲಿ ವಸಾಹತುಗಳನ್ನು ವಿಸ್ತರಿಸಲು ಅನುಮೋದನೆ ನೀಡಿದ್ದು, ಇದರಿಂದ ಇಸ್ರೇಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ.
ಟಾರ್ಟಸ್ ಕರಾವಳಿಯ ಸೈನಿಕ ತಾಣಗಳ ಮೇಲೆ ಇಸ್ರೇಲ್ ಭಾನುವಾರ ತಡರಾತ್ರಿ ಏರ್ಸ್ಟ್ರೈಕ್ ನಡೆಸಿದ್ದು, ಇದು 2012 ನಂತರ ನಡೆದ ಅತ್ಯಂತ ತೀವ್ರ ದಾಳಿ ಎಂಬ ಮಾಹಿತಿ ಸಿಕ್ಕಿದೆ.