ರಾಮನಗರದಲ್ಲಿ (Ramanagar) ನಡೆದ ಸರ್ಕಾರಿ ನೌಕರರ ಸಂಘದ ಅಭಿನಂದನಾ ಕಾರ್ಯಕ್ರಮದಲ್ಲಿ ಮತ್ತೆ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಡಿಸಿಎಂ (Dam) ಡಿಕೆಶಿ (Dk shivakumar) ಪ್ರಸ್ತಾಪಿಸಿದ್ದಾರೆ. ನಾವು ಮೂಲ ಬೆಂಗಳೂರಿನವರು (Bangalore).ಹಿಂದೆ ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜಿ.ಪಂ ಸದಸ್ಯ ಆಗಿದ್ದೆ ಎಂದು ಹೇಳಿದ್ದಾರೆ.

ನನ್ನ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ (Doddalahalli kempegowda).ನನ್ನ ಹೆಸರು ಬದಲಾವಣೆ ಮಾಡಲು ಆಗುತ್ತಾ ? ಬೆಂಗಳೂರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ.ಆ ಗೌರವ ಚನ್ನಪಟ್ಟಣ (Channapatna), ರಾಮನಗರ (Ramanagar), ಕನಕಪುರ (kanakapura), ಮಾಗಡಿಗೂ ಸಿಗಬೇಕು.ಇದಕ್ಕಾಗಿ ಸಿಎಂ ಬಳಿ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಆ ಮೂಲಕ ಚನ್ನಪಟ್ಟಣ ಬೈ ಎಲೆಕ್ಷನ್ (Channapattana Bi-election) ಮುನ್ನವೇ ಅಖಾಡ ರಂಗೇರಿದ್ದು, ಈಗಾಗಲೇ ರಾಜಕೀಯ ಗರಿಗರದರಿದೆ. ಈಗಾಗಲೇ ಈ ವಿಚಾರದ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದ್ದು, ಮತ್ತೊಮ್ಮೆ ಡಿಕೆಶಿ ಈ ವಿಚಾರ ಪ್ರಸ್ತಾಪಿಸಿರೋದು, ಕಿಚ್ಚು ಹೆಚ್ಚಾಗುವಂತೆ ಮಾಡಿದೆ.