ಎರಡು ವರ್ಷಗಳ ಹಿಂದೆ BMRCL ಚೀನಾ ಮೂಲದ ಸಂಸ್ಥೆಯೊಂದಕ್ಕೆ 216 ಬೋಗಿಗಳನ್ನು ಪೂರೈಸುವಂತೆ ಕೇಳಿತ್ತು. ಆದರೆ, ಗುತ್ತಿಗೆ ಪಡೆದ ಸಂಸ್ಥೆಯಿಂದ ಕೋಚ್ಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಯಾಕೆಂದು ನೋಡಿದರೆ ಗುತ್ತಿಗೆ ಪಡೆದ ಕಂಪನಿಯೂ ಸ್ಥಳೀಯ ಪಾಲುದಾರರ ಹುಡುಕಾಟದಲ್ಲಿದೆ ಆದ್ದರಿಂದ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಚೀನಾ ಮೂಲದ CRRCಯ ಅಂಗಸಂಸ್ಥೆಯಾದ CRCC ನಾನ್ಜಿಂಗ್ ಪುಜೆನ್ ಕೋ ಕಂಪನಿಯು ಡಿಸೆಂಬರ್ 2019ರಲ್ಲಿ 1,578 ಕೋಟಿ ಮೌಲ್ಯದಲ್ಲಿ 216 ಕೋಚ್ಗಳನ್ನು ನಿಗದಿತ ಸಮಯದಲ್ಲಿ ನಿರ್ಮಿಸಿಕೊಡುವುದಾಗಿ ಹೇಳಿತ್ತು. ಆದರೆ, ಅವಧಿಯೊಳಗೆ ಕೋಚ್ಗಳನ್ನು ಪೂರೈಸದ ಕಾರಣ BMRCL ಹಲವಾರು ಭಾರೀ ನೋಟಿಸ್ಗಳನ್ನು ಜಾರಿ ಮಾಡಿದೆ ಮತ್ತು ಬ್ಯಾಂಕ್ನಲ್ಲಿ ಇಟ್ಟಿರುವ ಶ್ಯೂರಿಟಿ ಹಣ 372 ಕೋಟಿ ರೂಪಾಯಿಯನ್ನು ಹಿಂಪಡೆಯುವುದಾಗಿ ತನ್ನ ನೋಟಿಸ್ನಲ್ಲಿ ಎಚ್ಚರಿಸಿದೆ.
ಆದರೆ, ಬ್ಯಾಂಕ್ನಲ್ಲಿ ಇಟ್ಟಿರುವ ಗ್ಯಾರಂಟಿ ಮೊತ್ತವನ್ನು ಹಿಂಪಡೆಯುವ ಕ್ರಮವನ್ನ ತೀವ್ರವಾಗಿ ಖಂಡಿಸಿರುವ CRRC ಸಂಸ್ಥೆ ರಾಜ್ಯ ಹೈಕೋರ್ಟ್ಗೆ ಮೊಕದ್ದಮೆ ಹೂಡಿದೆ. ವಿಚಾರಣೆಯನ್ನು ಫೆಬ್ರವರಿಯಲ್ಲಿ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ. ಚೀನಾ ಮೂಲದ ಕಂಪನಿಯೂ ಮೊದಲು ಬಿಡ್ ಮಾಡಿದವರಿಗಿಂತ 200 ಕೋಟಿ ಕಮ್ಮಿ ಬಿಡ್ ಮಾಡಿದ ಕಾರಣ BMRCL ಚೀನಾ ಮೂಲದ ಕಂಪನಿಗೆ ಗುತ್ತಿಗೆಯನ್ನ ನೀಡಿತ್ತು.
ಟೆಂಡರಿನಲ್ಲಿ ವಿಧಿಸಿರುವ ಷರತ್ತಿನ ಪ್ರಕಾರ ಚೀನಾ ಮೂಲದ ಸಂಸ್ಥೆಯು ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಭಾರತದಲ್ಲಿ 94% ಕೋಚ್ಗಳನ್ನು ತಯಾರಿಸಬೇಕಿತ್ತು. ಆದರೆ, ಕಂಪನಿಯೂ ಸ್ಥಳೀಯ ತಯಾರಕರೊಂದಿಗೆ ಯಾವುದೇ ತರಹದ ಒಪ್ಪಂದ ಮಾಡಿಕೊಳ್ಳಲು ಮುಂದಾಗಲಿಲ್ಲ ಎಂದು ತಿಳಿದು ಬಂದಿದೆ.
FDI ಪಾಲಿಸಿಯಲ್ಲಿ ಬದಲಾವಣೆ
ಈ ವರ್ಷದ ಜೂನ್ನಿಂದ ಕೋಚ್ಗಳ ಹಸ್ತಾಂತರವಾಗಬೇಕು. ಆದರೆ, ವಿದೇಶಿ ನೇರ ಹೂಡಿಕೆಯಲ್ಲಿನ ಬದಲಾವಣೆಯಿಂದಾಗಿ ಕಂಪನಿಯೂ ಎಲ್ಲಾ 216 ಕೋಚ್ಗಳನ್ನು ಚೀನಾದಲ್ಲೇ ತಯಾರಿಸಲು ಅನುಮತಿ ನೀಡುವಂತೆ BMRCL ಗೆ ಅರ್ಜಿ ಸಲ್ಲಿಸಿದೆ. ಆದರೆ, ಈ ಅರ್ಜಿಯನ್ನು ಸಂಸ್ಥೆ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ BMRCL ನಿರ್ದೇಶಕ ಅಂಜುಮ್ ಪರ್ವೇಜ್ ʻʻಟೆಂಡರ್ನಲ್ಲಿ ವಿಧಿಸಿರುವ ಷರತ್ತಿನ ಪ್ರಕಾರ ದೇಶೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಂಪನಿಗೆ ಅವಕಾಶವಿದೆ ಈ ಕುರಿತಾಗಿ ಕಂಪನಿಯೂ ಹೆಚ್ಚುವರಿ ಸಮಯವನ್ನ ಕೇಳಿದೆ, ನಾವು ಸಮಯವನ್ನು ನೀಡಲು ಒಪ್ಪಿದ್ದೇವೆ. ಆದರೆ, ಕೊಟ್ಟ ಸಮಯದಲ್ಲಿ ಕಂಪನಿ ಒಪ್ಪಂದ ಮಾಡಿಕೊಳ್ಳುವಲ್ಲಿ ವಿಫಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದುʼʼ ಆದರೆ, ಒಪ್ಪಂದವನ್ನು ರದ್ದುಗೊಳಿಸುವ ಯಾವುದೇ ನಿರ್ಧಾರವನ್ನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಗುತ್ತಿಗೆ ನೀಡಿರುವ ಕೋಚ್ಗಳು CBTC ಸಿಗ್ನಲಿಂಗ್ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ ಮತ್ತು ಚಾಲಕರಹಿತವಾಗಿ ಕಾರ್ಯನಿರ್ವಹಿಸುತ್ತವೆ. ಸದ್ಯ 216 ನೂತನ ಬೋಗಿಗಳಲ್ಲಿ 121 ಬೋಗಿಗಳನ್ನು ನೇರಳೆ ಮಾರ್ಗಕ್ಕಾಗಿ ಮತ್ತು 95 ಬೋಗಿಗಳನ್ನು ಹಸಿರು ಮಾರ್ಗಕ್ಕಾಗಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ರೀಚ್-5ರ ಆರ್ವಿ ರಸ್ತೆ ಹಾಗೂ ಬೊಮ್ಮನಹಳ್ಳಿ ನಡುವೆ ಉಪಯೋಗಿಸಲು ನಿರ್ಧರಿಸಲಾಗಿದೆ.