ಭಾನುವಾರದಿಂದ ಆರಂಭವಾಗಿರುವ T-20 ವಿಶ್ವಕಪ್ ಮೊದಲ ಪಂದ್ಯಾವಳಿಯಲ್ಲಿ ಅಚ್ಚರಿಯ ರೀತಿಯಲ್ಲಿ ನಮೀಬಿಯಾ ತಂಡವು ಶ್ರೀಲಂಕಾ ತಂಡಕ್ಕೆ 55 ರನ್ಗಳ ಸೋಲುಣಿಸಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ಲ್ಲಿರುವ ಸೈಮಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿತ್ತು. ಇನ್ನು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 163 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ನಮೀಬಿಯಾ ತಂಡದ ಸಂಘಟಿತ ಬೌಲಿಂಗ್ ಎದುರು ರನ್ ಗಳಿಸಲು ತಿಣುಕಾಡಿದ ಬ್ಯಾಟರ್ಗಳು 108 ರನ್ ಗಳಿಸಲು ಶಕ್ತರಾದರು.
ಏಷ್ಯಾಕಪ್ ಗೆಲುವಿನ ವಿಶ್ವಾಸದಲ್ಲಿದ್ದ ಶ್ರೀಲಂಕಾ ತಂಡವು ಅನಾನುಭವಿ ನಮೀಬಿಯಾ ತಂಡದ ಎದುರು ಸುಲಭ ಜಯ ಗಳಿಸಬಹುದು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿತ್ತು.
ಆದರೆ, ಸರ್ವಾಂಗೀಣ ಪ್ರದರ್ಶನ ತೋರಿದ ನಮೀಬಿಯಾ ತಂಡವು ಶ್ರೀಲಂಕಾ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.