ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅವಿವೇಕಿ, ಸಂಸ್ಕೃತಿ ಹೀನ ವ್ಯಕ್ತಿ. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡಿದ್ದ ನಳಿನ್ಕುಮಾರ್ ಕಟೀಲ್ ಅಂತಾ ವಾಗ್ದಾಳಿ ನಡೆಸಿದ್ದಾರೆ.
ನಳಿನ್ ಕುಮಾರ್, ರಾಹುಲ್ ವಿರುದ್ಧ ಬರೀ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಇವರದ್ದೆ ಸರ್ಕಾರ ಇದೆ ಇವರ ಕೈಯಲ್ಲೇ Narcotics Control Bureau (NCB) ಇದೆ ಯಾಕೆ ತನಿಖೆ ಮಾಡ್ತಿಲ್ಲ. ಎಲ್ಲಾ ಮುಖ್ಯ ಸ್ವತಂತ್ರ ತನಿಖಾ ಸಂಸ್ಥೆಗಳು ನಿಮ್ಮ ಜೊತೆಯಲ್ಲೇ ಇದೆಯಲ್ಲ ತನಿಖೆ ಮಾಡಿಸಿ ಎಂದು ಹೇಳಿದ್ದಾರೆ.
ರಾಹುಲ್ ಮತ್ತು ಸೋನಿಯಾ ಜಾಮಿನಿನ ಮೇಲೆ ಹೊರಗಿದ್ದಾರೆ ಎಂದು ನಳಿನ್ ಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಅಮಿತ್ ಶಾ 25 July 2010 ರಿಂದ ಮೂರ್ ತಿಂಗಳು ಹತ್ತು ದಿವಸ ಎಲ್ಲಿ ಇದ್ರು? ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಆಗಿದ್ದು ಈಗ ಹಾಲಿ ಗೃಹ ಸಚಿವ ಅಮಿತ್ ಶಾ ಆ ಸಮಯದಲ್ಲಿ ಎಲ್ಲಿದ್ದರು ದಯವಿಟ್ಟು ಹೇಳಿ.? ಅವರ ವಿರುದ್ಧ ಸೆಕ್ಷನ್ 302 ಮರ್ಡರ್, 120b conspiracy, 341 wrongful restraint, 364, 365, 368 kidnapping, 384 extraction, 201 in ಸೊಹ್ರಾಬುದ್ದೀನ್ ಕೇಸ್ ಇಷ್ಟು ಕೇಸು ದಾಖಲಾಗಿದೆ ಇದೆಲ್ಲವೂ ಯಾಕ್ ಆಯ್ತು ಸ್ವಲ್ಪ ವಿವರಿಸಲು ಸಾಧ್ಯವೇ ನಳಿನ್ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ರಾಹುಲ್ ಗಾಂಧಿ ಸೋನಿಯಾ ಗಾಂಧಿ ವಿರುದ್ಧ ಯಾವ ಕೇಸ್ ಇದೆ, ಯಾಕ್ ಅವರು ಜಾಮಿನಿನ ಮೇಲೆ ಹೊರಗಿದ್ದಾರೆ ದಯವಿಟ್ಟು ನಳಿನ್ ಹೇಳಬೇಕು ಎಂದು ಹೇಳಿದ್ದಾರೆ. ಎಲ್ಲಾ ತನಿಖೆ ಸಂಸ್ಥೆ ನಿಮ್ಮ ಕೈಯಲ್ಲೇ ಇದೆ ತನಿಖೆ ಮಾಡಿಸಿ ಹೇಳಿ. ಯಾಕ್ ಯಾರೊ ವರದಿ ಮಾಡಿದ್ದಾರೆ ಅಂತ ಮಾತಾಡ್ತಿರಿ ಎಂದು ಟೀಕಿಸಿದ್ದಾರೆ.

ನಳಿನ್ ಕುಮಾರ್ ಒಬ್ಬ ವಿವಾಹಿತ ಮಹಿಳೆಯನ್ನು ಮದುವೆಯಾಗ್ತಿನಿ ಎಂದು ಮೋಸ ಮಾಡಿ, ಬ್ಲಾಕ್ ಮೇಲ್ ಮಾಡಿದ್ದ.
ಈ ಕುರಿತು ಮಾತಾಡಿದ ಲಕ್ಷ್ಮನ್, 2014 ರಲ್ಲಿ ಒಬ್ಬ ವಿವಾಹಿತ ಮಹಿಳೆಯನ್ನು ಅಕ್ರಮವಾಗಿ ಸಂಬಂಧ ಹೊಂದು ನಂತರ ಅವರ ಗಂಡನನ್ನೆ ಬ್ಲಾಕ್ ಮೇಲ್ ಮಾಡಿ ಮೋಸ ಮಾಡಿದ್ದ ಆ ನಂತರ ಆ ಮಹಿಳೆ ಮಾಧ್ಯಮಕ್ಕೆ ಬಂದು ಡಿಬೇಟ್ ನಲ್ಲಿ ಭಾಗವಹಿಸಿದ್ದನ್ನು ನೆನಪಿಸುತ್ತೇನೆ. ಇದು ಸಾರ್ವಜನಿಕವಾಗಿ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಜನಗಳ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದೀರಿ, ಜನಗಳ ಸಮಸ್ಯೆಗಳ ಬಗ್ಗೆ ಮಾತಾಡೊಣ ಬನ್ನಿ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದ ಬಗ್ಗೆ ಮಾತಾಡೊಣ ಬನ್ನಿ, ಮೋದಿ ಲಕ್ಷಗಟ್ಟಲೆ ಸಾಲ ಮಾಡಿದ್ದಾರೆ ಅದರ ಬಗ್ಗೆ ಚರ್ಚೆ ಮಾಡೊಣ ಬನ್ನಿ. ನಾವು ನಮ್ಮ ಇತಿಹಾಸ ಹೇಳ್ತೆವೆ ನೀವು ಮಾಡಿರುವ ಕೆಲಸದ ಬಗ್ಗೆ ಚರ್ಚೆ ಮಾಡೊಣ ಬನ್ನಿ ಎಂದು ಬಹಿರಂಗ ಚರ್ಚೆಗೆ ನಳಿನ್ ಕುಮಾರ್ ಕಟೀಲ್ ಅನ್ನು ಕರೆದಿದ್ದಾರೆ.






