ಉಗುರು ಸುತ್ತು ಅನ್ನೋದು ಹೆಚ್ಚು ಜನಕ್ಕೆ ತಿಳಿದಿಲ್ಲ ಆದ್ರೆ ಇದರಿಂದ ಆಗುವ ನೋವು ತುಂಬಾನೆ ಇದೆ.ಏನಪ್ಪಾ ಈ ಉಗುರು ಸುತ್ತು ಇದಕ್ಕೆ ಪರಿಹಾರವೇನು ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ..ಕೆಲವು ಬಾರಿ ಉಗುರಿನ ಒಳಗೆ ಮಣ್ಣು ,ಮರಳು ಅಥವಾ ಕೆಸರು ಹೋದ್ರೆ ಹಾಗೂ ಉಗುರಿನ ಬಳಿ ಇರುವ ಚರ್ಮ ಎದ್ದಾಗ ತುಂಬಾನೇ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಇದರಲ್ಲಿ ಪಸ್ ಆಗುವಂತಹ ಚಾನ್ಸಸ್ ಕೂಡ ಜಾಸ್ತಿ ಇರುತ್ತೆ.ಇದರಿಂದಾಗುವ ನೋವು ಅಬ್ಬಬ್ಬಾ ಎಂಥವರಿಗೂ ಬೇಡ ಅನ್ನುವ ಹಾಗೆ ಇರುತ್ತದೆ.. ಇದನ್ನ ಉಗುರು ಸುತ್ತು ಅಂತ ಹೇಳ್ತಾರೆ.ಈ ಉಗುರು ಸುತ್ತು ಆಗದ ಉಗುರು ಎದ್ದು ಬಂದು ಚರ್ಮ ಮಾತ್ರ ಉಳಿಯುವ ಚಾನ್ಸ್ ಹೆಚ್ಚಿರುತ್ತಾ..
ಟೀ ಟ್ರೀ ಆಯಿಲ್
ಅರ್ಧ ಟೇಬಲ್ ಸ್ಪೂನ್ ಅಷ್ಟು ಟೀ ಟ್ರೀ ಆಯಿಲ್ ಅರ್ಧ ಟೇಬಲ್ ಸ್ಪೂನಷ್ಟು ಆಲಿವ್ ಆಯಿಲ್ ಅನ್ನು ಹಾಕಿ ಸ್ವಲ್ಪ ಬಿಸಿ ಮಾಡಿ, ಉಗುರು ಸುತ್ತು ಆಗಿರುವ ಬೆರಳಿಗೆ ಈ ಮಿಶ್ರಣದ ಎಣ್ಣೆಯನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ,ಪ್ರತಿದಿನ ಹೀಗೆ ಮಾಡುವುದರಿಂದ ನೋವು ಬೇಗ ನಿವಾರಣೆಯಾಗುತ್ತೆ ಫಸ್ಟ್ ಕಡಿಮೆಯಾಗುತ್ತೆ.
ಬೆಳ್ಳುಳ್ಳಿ
ಉಗುರು ಸುತ್ತಾದಾಗ ಒಂದು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಉಗುರು ಸುತ್ತಾದ ಜಾಗದಲ್ಲಿ ಆ ಬೆಳ್ಳುಳ್ಳಿಯನ್ನು ಇಟ್ಟು ಅದರ ಮೇಲೆ ಬಾಂಡೇಜ್ ಅಥವಾ ಸಾಕ್ಸ್ ಅನ್ನು ಅನ್ನು ಹಾಕಿಕೊಂಡು ಎರಡು ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಉಗುರು ಸುತ್ತು ಬೇಗನೆ ನಿವಾರಣೆ ಆಗುತ್ತೆ. ಇದು ಒಂದು ಇಂಪಾರ್ಟೆಂಟ್ ಟ್ರಿಕ್.
ಬಿಸಿ ಶಾಖ
ಉಗುರು ಸುತ್ತಾದ ಬೆರಳಿನ ಮೇಲೆ ಬಿಸಿ ನೀರಿನ ಶಾಖ ಅಥವಾ ಉಪ್ಪಿನ ಶಾಖವನ್ನು ಕೊಡುವುದರಿಂದ ನೋವು ಹಾಗೂ ಉಗುರು ಸುತ್ತು ನಿವಾರಣೆ ಆಗೋದಕ್ಕೆ ಇದು ಸಹಾಯ ಮಾಡುತ್ತದೆ.
ಎಳ್ಳೆಣ್ಣೆ
ಎರಡು ಟೇಬಲ್ ಸ್ಪೂನ್ ಅಷ್ಟು ಎಳ್ಳೆಣ್ಣೆಗೆ ಚಿಟಿಕೆ ಅರಿಶಿಣವನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ಉಗುರು ಸುತ್ತು ಆದ ಬೆರಳಿಗೆ ಈ ಮಿಶ್ರಣವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಅದನ್ನು ಉಗುರು ಬೆಚ್ಚ ನೀರಿನಿಂದ ವಾಶ್ ಮಾಡುವುದರಿಂದ ನೋವು ಬೇಗನೆ ಕಡಿಮೆಯಾಗುತ್ತೆ.