ಹಿಂದೂ ಧರ್ಮದಲ್ಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾದ ಮಹಾ ಕುಂಭಮೇಳಕ್ಕೆ ಜನವರಿ 13 ರಂದು ಚಾಲನೆ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಅಪರೂಪದ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಲಕ್ಷಾಂತರ ಸಂಖ್ಯೆಯ ನಾಗ ಸಾಧುಗಳು, ಸಾಧು ಸಂತರುಗಳು ಕೂಡಾ ಆಗಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ವಿಡಿಯೋಗಳೇ ಹರಿದಾಡುತ್ತಿದೆ. ಅದೇ ರೀತಿ ಇಲ್ಲೊಂದು ಮಹಾಕುಂಭಕ್ಕೆ ಸಂಬಂಧಿಸಿದ ದೃಶ್ಯವೊಂದು ವೈರಲ್ ಆಗುತ್ತಿದ್ದು, ನಾಗಾ ಸಾಧುವೊಬ್ಬರು ಯೂಟ್ಯೂಬರನ್ನು ಹೊಡೆದೋಡಿಸಿದ್ದಾರೆ.
ಪ್ರಯಾಗ್ ರಾಜ್‌ನ ಮಹಾ ಕುಂಭಮೇಳದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದ ನಾಗ ಸಾಧು ಬಳಿ ಬಂದ ಯುಟ್ಯೂಬರ್ ಮೈಕ್ ಹಿಡಿದು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾನೆ. ಮೊದಲಿಗೆ ಶಾಂತವಾಗಿಯೇ ಆತನ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಂತರ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಆತನನ್ನು ಅಲ್ಲಿಂದ ಹೊಡೆದೋಡಿಸಿದ್ದಾರೆ. ಸುರೇಶ್ ಸಿಂಗ್ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ