ಹೊಸ ವರ್ಷಾಚರಣೆಗೆ (New year) ಸಾಂಸ್ಕೃತಿಕ ನಗರಿ ಮೈಸೂರೂ (Mysuru) ಸಜಾಗಿದ್ದು, ಆದ್ರೆ ಈ ಬಾರಿ ಕಳೆದ ಬಾರಿಗಿಂದ ಹೆಚ್ಚಿನ ನಿರ್ಬಂಧಗಳ ನಡುವೆ ಮೈಸೂರಿಗರು ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕಿದೆ.

ಅಂಬಾವಿಲಾಸ ಅರಮನೆಯ (Amba Vilas palace) ಮುಂಭಾಗ ಈ ವರ್ಷ ಹೊಸ ವರ್ಷಾಚರಣೆಗೆ ಯಾವುದೇ ಇಲ್ಲ. ಪ್ರತಿವರ್ಷ ಮಧ್ಯ ರಾತ್ರಿ ಅರಮನೆ ಮುಂಭಾಗ ಹೊಸ ವರ್ಷ ಆಚರಣೆ ಮಾಡಲಾಗುತ್ತಿತ್ತು. ಮಾಗಿ ಉತ್ಸವದ ಹಿನ್ನೆಲೆ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಈ ವರ್ಷ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ.
ಮೈಸೂರಿನ ಅಂಬಾವಿಲಾಸ ಅರಮನೆಯನ್ನು ರಾತ್ರಿ 12 ಗಂಟೆಗೆ ದೀಪಾಲಂಕಾರದ ಮೂಲಕ ಅಲಂಕರಿಸಲಾಗುತ್ತಿತ್ತು.ಇದರ ಜೊತೆಗೆ ಫಲಪುಷ್ಪ (Flower show) ಪ್ರದರ್ಶನ, ಸಂಗೀತ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಆದ್ರೆ ಮಾಜಿ ಪ್ರಧಾನಿ ಮನಮೋಹನಸಿಂಗ್ ನಿಧನ ಹಿನ್ನೆಲೆ ಕನ್ನಡ, ಇಂಗ್ಲಿಷ್ ಪೊಲೀಸ್ ಬ್ಯಾಂಡ್ ಸೇರಿದಂತೆ ಹಲವು ಕಾರ್ಯಕ್ರಮಗಳು ರದ್ದು ಮಾಡಲಾಗಿದೆ.