ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಶಾಸಕ ಸಾರಾ ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮೈಸೂರಿನಿಂದ ವರ್ಗಾವಣೆಗೊಂಡರೂ ಸಾರಾ ಮಹೇಶ್ ರೋಹಿಣಿ ವಿರುದ್ಧ ಆರೋಪ ಹೊರಿಸುವುದನ್ನು ನಿಲ್ಲಿಸಿಲ್ಲ.
ರೋಹಿಣಿ ಸಿಂಧೂರಿಯವರು ಬಟ್ಟೆ ಬ್ಯಾಗ್ನಲ್ಲಿ ಕಿಕ್ಬ್ಯಾಗ್ ಪಡೆದಿದ್ದಾರೆ ಎಂದು ಮಹೇಶ್ ಆರೋಪಿಸಿದ ಬೆನ್ನಲ್ಲೇ, ಮಹೇಶ್ ವಿರುದ್ಧ ರೋಹಿಣಿ ಮಾಡಿದ್ದ ಆರೋಪವನ್ನು ಮರು ತನಿಖೆ ಮಾಡಲು ಆದೇಶಿಸಲಾಗಿದೆ.
ಸಾರಾ ಮಹೇಶ್ ಅವರ ಒಡೆತನದ ಸಾರಾ ಚೌಲ್ಟ್ರಿ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಈ ಆರೋಪವನ್ನು ಸಾರಾ ಮಹೇಶ್ ನಿರಾಕರಿಸಿದ್ದರು.
ಆರೋಪ ಕೇಳಿಬಂದ ಸ್ಥಳಗಳಲ್ಲಿ ಈಗಾಗಲೇ ಸರ್ವೇ ನಡೆಸಿ ಯಾವುದೇ ಸರ್ಕಾರಿ ಜಾಗ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರು. ಇದೀಗ, ಪುನರ್ ಸರ್ವೇ ನಡೆಸಲು ಭೂದಾಖಲೆಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸರ್ವೇ ಕಾರ್ಯದ ವೇಳೆ ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಕಾರ್ಯಾಚರಣೆ ಮಾಡಲು ಮುಂದಾಗಿದ್ದು, ಸ್ಥಳೀಯ ಪ್ರಭಾವಕ್ಕೆ ಒಳಗಾಗದಂತೆ ಇಲಾಖೆ ಆಯುಕ್ತರು ಎಚ್ಚರಿಕೆ ವಹಿಸಿದ್ದಾರೆ.
ಭೂದಾಖಲೆಗಳ ಉಪನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರ ತಂಡವನ್ನು ಸರ್ವೆ ಕಾರ್ಯಕ್ಕೆ ನೇಮಕ ಮಾಡಲಾಗಿದ್ದು, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
Also Read: ʼರೋಹಿಣಿ ಸಿಂಧೂರಿಗೆ ಬಟ್ಟೆ ಬ್ಯಾಗ್ ಹೆಸರಲ್ಲಿ 8 ಕೋಟಿ ಕಿಕ್ ಬ್ಯಾಕ್ʼ!- ಸಾರಾ.ಮಹೇಶ್
ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆಯೂ ಸರ್ವೇ ನಡೆಯಲಿದ್ದು, ದಟ್ಟಗಳ್ಳಿಯ ಸಾ.ರಾ.ಚೌಲ್ಟ್ರಿಯ ಜಾಗವನ್ನೂ ಅಧಿಕಾರಿಗಳು ಮರು ಅಳತೆ ಮಾಡಲಿದ್ದಾರೆ.
ರೋಹಿಣಿ ಸಿಂಧೂರಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಾರಾ ಮಹೇಶ್, ʼರಾಜಕಾಲುವೆ ಒತ್ತುವರಿ ಮಾಡಿ ಚೌಲ್ಟ್ರಿ ನಿರ್ಮಾಣವಾಗಿದ್ದರೆ, ಚೌಲ್ಟ್ರಿಯನ್ನು ಸಾರ್ವಜನಿಕ ಉಪಯೋಗಕ್ಕೆಂದು ರಾಜ್ಯಪಾಲರಿಗೆ ಹಸ್ತಾಂತರಿಸುವೆ, ಆರೋಪ ಸಾಬೀತಾದಲ್ಲಿ ಸಾರ್ವಜನಿಕ ಬದುಕಿನಿಂದ ನಿವೃತ್ತಿ ಹೊಂದುವೆ, ಅದೇ ವೇಳೆ, ಆರೋಪ ಸುಳ್ಳಾದಲ್ಲಿ, ರೋಹಿಣಿ ಅವರ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕೆಂದು ಸವಾಲು ಹಾಕಿದ್ದರು.
ರೋಹಿಣಿ ಬಟ್ಟೆ ಬ್ಯಾಗ್ ನಲ್ಲಿ ಕಿಕ್ಬ್ಯಾಕ್ ಪಡೆದಿದ್ದಾರೆಂದು ಸಾರಾ ಮಹೇಶ್ ಆರೋಪ ಹೊರಿಸಿದ ಬೆನ್ನಲ್ಲೇ ಮಹೇಶ ವಿರುದ್ಧ ಕೇಳಿಬಂದ ಆರೋಪದ ಮರು ತನಿಖೆಯ ಸುದ್ದಿ ಬಹಿರಂಗಗೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತನ್ನ ವಿರುದ್ಧ ಅಧಿಕಾರಿಗಳು ಒಂದಾಗಿದ್ದಾರೆಂಬ ಸುಳಿವು ಲಭ್ಯವಾಗಿಯೇ ಸಾರಾ ಮಹೇಶ್ ರೋಹಿಣಿ ವಿರುದ್ಧ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ ಎಂದೂ ಹೇಳಲಾಗಿದೆ.