• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೈಸೂರು ಭೂ ಅಕ್ರಮ ತನಿಖೆಗೆ ಮರು ಜೀವ: ಸಾರಾ ಮಹೇಶ್ ವಿರುದ್ಧ ಒಗ್ಗಟ್ಟಾದರೇ ಅಧಿಕಾರಿಗಳು?

Any Mind by Any Mind
September 4, 2021
in ಕರ್ನಾಟಕ
0
ಮೈಸೂರು ಭೂ ಅಕ್ರಮ ತನಿಖೆಗೆ ಮರು ಜೀವ: ಸಾರಾ ಮಹೇಶ್ ವಿರುದ್ಧ ಒಗ್ಗಟ್ಟಾದರೇ ಅಧಿಕಾರಿಗಳು?
Share on WhatsAppShare on FacebookShare on Telegram
ADVERTISEMENT

ಕಳೆದ ಕೆಲವು ತಿಂಗಳುಗಳಿಂದ‌ ನಡೆಯುತ್ತಿರುವ ಶಾಸಕ ಸಾರಾ ಮಹೇಶ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮೈಸೂರಿನಿಂದ ವರ್ಗಾವಣೆಗೊಂಡರೂ ಸಾರಾ ಮಹೇಶ್‌ ರೋಹಿಣಿ ವಿರುದ್ಧ ಆರೋಪ ಹೊರಿಸುವುದನ್ನು ನಿಲ್ಲಿಸಿಲ್ಲ.

ರೋಹಿಣಿ ಸಿಂಧೂರಿಯವರು ಬಟ್ಟೆ ಬ್ಯಾಗ್‌ನಲ್ಲಿ ಕಿಕ್‌ಬ್ಯಾಗ್‌ ಪಡೆದಿದ್ದಾರೆ ಎಂದು ಮಹೇಶ್‌ ಆರೋಪಿಸಿದ ಬೆನ್ನಲ್ಲೇ, ಮಹೇಶ್‌ ವಿರುದ್ಧ ರೋಹಿಣಿ ಮಾಡಿದ್ದ ಆರೋಪವನ್ನು ಮರು ತನಿಖೆ ಮಾಡಲು ಆದೇಶಿಸಲಾಗಿದೆ.

ಸಾರಾ ಮಹೇಶ್‌ ಅವರ ಒಡೆತನದ ಸಾರಾ ಚೌಲ್ಟ್ರಿ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಈ ಆರೋಪವನ್ನು ಸಾರಾ ಮಹೇಶ್‌ ನಿರಾಕರಿಸಿದ್ದರು.

ಸಾರಾ ಚೌಲ್ಟ್ರಿ

ಆರೋಪ ಕೇಳಿಬಂದ ಸ್ಥಳಗಳಲ್ಲಿ ಈಗಾಗಲೇ ಸರ್ವೇ ನಡೆಸಿ ಯಾವುದೇ ಸರ್ಕಾರಿ ಜಾಗ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರು. ಇದೀಗ, ಪುನರ್ ಸರ್ವೇ ನಡೆಸಲು ಭೂದಾಖಲೆಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸರ್ವೇ ಕಾರ್ಯದ ವೇಳೆ ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಕಾರ್ಯಾಚರಣೆ ಮಾಡಲು ಮುಂದಾಗಿದ್ದು, ಸ್ಥಳೀಯ ಪ್ರಭಾವಕ್ಕೆ ಒಳಗಾಗದಂತೆ ಇಲಾಖೆ ಆಯುಕ್ತರು ಎಚ್ಚರಿಕೆ ವಹಿಸಿದ್ದಾರೆ.

ಭೂದಾಖಲೆಗಳ ಉಪನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರ ತಂಡವನ್ನು ಸರ್ವೆ ಕಾರ್ಯಕ್ಕೆ ನೇಮಕ ಮಾಡಲಾಗಿದ್ದು, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.  

Also Read: ʼರೋಹಿಣಿ ಸಿಂಧೂರಿಗೆ ಬಟ್ಟೆ ಬ್ಯಾಗ್ ಹೆಸರಲ್ಲಿ 8 ಕೋಟಿ ಕಿಕ್ ಬ್ಯಾಕ್ʼ!- ಸಾರಾ.ಮಹೇಶ್

ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆಯೂ ಸರ್ವೇ ನಡೆಯಲಿದ್ದು,  ದಟ್ಟಗಳ್ಳಿಯ ಸಾ.ರಾ.ಚೌಲ್ಟ್ರಿಯ ಜಾಗವನ್ನೂ ಅಧಿಕಾರಿಗಳು ಮರು ಅಳತೆ ಮಾಡಲಿದ್ದಾರೆ.

ರೋಹಿಣಿ ಸಿಂಧೂರಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಾರಾ ಮಹೇಶ್‌, ʼರಾಜಕಾಲುವೆ ಒತ್ತುವರಿ ಮಾಡಿ ಚೌಲ್ಟ್ರಿ ನಿರ್ಮಾಣವಾಗಿದ್ದರೆ, ಚೌಲ್ಟ್ರಿಯನ್ನು ಸಾರ್ವಜನಿಕ ಉಪಯೋಗಕ್ಕೆಂದು ರಾಜ್ಯಪಾಲರಿಗೆ ಹಸ್ತಾಂತರಿಸುವೆ, ಆರೋಪ ಸಾಬೀತಾದಲ್ಲಿ ಸಾರ್ವಜನಿಕ ಬದುಕಿನಿಂದ ನಿವೃತ್ತಿ ಹೊಂದುವೆ, ಅದೇ ವೇಳೆ, ಆರೋಪ ಸುಳ್ಳಾದಲ್ಲಿ, ರೋಹಿಣಿ ಅವರ ಐಎಎಸ್‌ ಹುದ್ದೆಯಿಂದ ಅಮಾನತು ಮಾಡಬೇಕೆಂದು ಸವಾಲು ಹಾಕಿದ್ದರು.

ರೋಹಿಣಿ ಬಟ್ಟೆ ಬ್ಯಾಗ್‌ ನಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದಾರೆಂದು ಸಾರಾ ಮಹೇಶ್‌ ಆರೋಪ ಹೊರಿಸಿದ ಬೆನ್ನಲ್ಲೇ ಮಹೇಶ ವಿರುದ್ಧ ಕೇಳಿಬಂದ ಆರೋಪದ ಮರು ತನಿಖೆಯ ಸುದ್ದಿ ಬಹಿರಂಗಗೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತನ್ನ ವಿರುದ್ಧ ಅಧಿಕಾರಿಗಳು ಒಂದಾಗಿದ್ದಾರೆಂಬ ಸುಳಿವು ಲಭ್ಯವಾಗಿಯೇ ಸಾರಾ ಮಹೇಶ್‌ ರೋಹಿಣಿ ವಿರುದ್ಧ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ ಎಂದೂ ಹೇಳಲಾಗಿದೆ.

ಬಟ್ಟೆ ಬ್ಯಾಗ್‌ ಹೆಸರಲ್ಲಿ ಕಿಕ್ ಬ್ಯಾಕ್: Rohini Sindhuri ಮೇಲೆ ಮತ್ತೊಂದು ಗಂಭೀರ ಆರೋಪ  ಹೊರಿಸಿದ Sa Ra Mahesh
Tags: Rohini SindhuriSa Ra Maheshಎಚ್ ಡಿ ಕುಮಾರಸ್ವಾಮಿಬಿಜೆಪಿಭೂ ಅಕ್ರಮ ತನಿಖೆಮೈಸೂರುರೋಹಿಣಿ ಸಿಂಧೂರಿಸಾರಾ ಮಹೇಶ್
Previous Post

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿಗೆ ಚಿಂತನೆ

Next Post

ಭಾರತದ ಉದ್ಯಮಗಳ ಪ್ರಶ್ನಾರ್ಹ ರಾಷ್ಟ್ರಭಕ್ತಿ: ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡದ ಕೈಗಾರಿಕೆಗಳು!

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

May 26, 2026
Next Post
ಭಾರತದ ಉದ್ಯಮಗಳ ಪ್ರಶ್ನಾರ್ಹ ರಾಷ್ಟ್ರಭಕ್ತಿ: ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡದ ಕೈಗಾರಿಕೆಗಳು!

ಭಾರತದ ಉದ್ಯಮಗಳ ಪ್ರಶ್ನಾರ್ಹ ರಾಷ್ಟ್ರಭಕ್ತಿ: ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡದ ಕೈಗಾರಿಕೆಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada