ಮಹಾರಾಷ್ಟ್ರ ಸದ್ಯ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟನ್ನು ತಣಿಸಲು ಮುಂದಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ನಾಯಕರು ಬಂಡಾಯ ಶಮನಗೊಳಿಸಲು ಮುಂದಾಗಿದ್ದಾರೆ.
ಇತ್ತ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಸೇರಿದಂತೆ ತನ್ನೆಲ್ಲಾ ಶಾಸಕರಿಗೆ ವಾಪಸ್ಸಾಗುವಂತೆ ಮನವಿ ಮಾಡಿದೆ ಮತ್ತು ಬೇಡಿಕೆ ಈಡೇರಿಸುವುದಾಗಿ ಮಾತು ನೀಡಿದೆ.
ಇಲ್ಲಿವೆ ಪ್ರಮುಖ ಅಂಶಗಳು
1) ಸದ್ಯ ಬಂಡಾಯ ಶಾಸಕರೊಂದಿಗೆ ಪ್ರವಾಹ ಪೀಡಿತ ಗುವಾಹಟಿಯಲ್ಲಿ ಸಚಿವ ಏಕನಾಥ್ ಶಿಂಧೆಯೊಂದಿಗೆ ಬೀಡು ಬಿಟ್ಟಿರುವ ಶಾಸಕ ಸಂಜಯ್ ಶಿರ್ಸತ್ ನಮ್ಮಗೆ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿ ಮನೆ ಬಾಗಿಲು ಬಂದ್ ಮಾಡಲಾಗಿತ್ತು ಮತ್ತು ಘಂಟೆಘಟ್ಟಲೆ ನಮ್ಮನ್ನು ಕಾಯುವಂತೆ ಮಾಡಿದ್ದರು ಎಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.
2) ಸದ್ಯ ಬಂಡಾಯ ಶಾಸಕರು ಹೇಳುತ್ತಿರುವ ಪ್ರಕಾರ ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ ಬದಲಾಗಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸುವಂತೆ ಎಂದು ಶಾಸಕ ದೀಪಕ್ ಕೇಸರಕರ್ ಆಗ್ರಹಿಸಿದ್ದಾರೆ.
3) ನಿನ್ನೆ ಎಕನಾಥ್ ಶಿಂಧೆ ಜೊತೆ ಇದ್ದ ಶಾಸಕರ ಸಂಖ್ಯೆ ಇಂದು ಬೆಳ್ಳಗ್ಗೆ ಹೆಚ್ಚುವರಿ ಐವರು ಶಾಸಕರ ಸೇರ್ಪಡೆಯಿಂದ 43 ಏರಿಕೆಯಾಗಿದೆ ಇನ್ನಷ್ಟು ಶಾಸಕರು ರೆಬೆಲ್ ಕ್ಯಾಂಪ್ ಸೇರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
4) ಸದ್ಯ ಏಕನಾಥ್ ಶಿಂಧೆ ಬಂಡಾಯಕ್ಕೆ ಮುಖ್ಯ ಕಾರಣ ತಿಳಿದು ಬಂದಿದ್ದು ಉದ್ದವ್ ಠಾಕ್ರೆ ಪುತ್ರ ಸಚಿವ ಆದಿತ್ಯ ಠಾಕ್ರೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಮತ್ತು ಶಿವಸೇನೆಗಿಂತ ಮೈತ್ರಿ ಪಕ್ಷದ ಶಾಸಕರು ಹಾಗು ಮುಖಂಡರು ಹೆಚ್ಚು ಬಲಿಷ್ಠರಾಗುತ್ತಿದ್ದರು ಎಂದು ಆರೋಪಿಸಲಾಗಿದೆ.
5) ಬಹ ವರ್ಷಗಳ ಸರ್ಕಾರದಲ್ಲಿ ಪಾಲು ಹೊಂದಿರುವ ಕಾಂಗ್ರೆಸ್ ಹಾಗು ಎನ್ಸಿಪಿ ಪಕ್ಷಗಳು ಏಕನಾಥ್ ಶಿಂಧೆರನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಹಾಗೆ ಮಾಡಿದ್ದಲ್ಲಿ ಸರ್ಕಾರ ಉರುಳುವುದಿಲ್ಲ ಎಂಬ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
6) ಸದ್ಯ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಟ್ಟು ಉಲ್ಭಣಿಸಿದ್ದು ಶರದ್ ಪವಾರ್ ನೇತೃತ್ವದಲ್ಲಿ ಎನ್ಸಿಪಿ ಶಾಸಕರು ಹಾಗು ಸಚಿವರು ಸಭೆ ನಡೆಸಿದ್ದಾರೆ ಮತ್ತು ಮುಂದಿನ ಮಡೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
7) ಬುಧವಾರ ಸಾಯಂಕಾಲ ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಾನು ಯಾವುದೇ ಪದವಿಗೆ ಆಸೆ ಪಟ್ಟು ಬಂದಿಲ್ಲ ನಾನು ಬಾಳಾ ಠಾಕ್ರೆಯವರ ಮಗ ನನ್ನ ಸ್ವಂತದವರಿಗೆ ನಾನು ಮುಖ್ಯಮಂತ್ರಿಯಾಗಲು ಇಷ್ಟವಿಲ್ಲ ಎಂದರೆ ಅದನ್ನು ಬಂದು ನೇರವಾಗಿ ನನ್ನಗೆ ಹೇಳಲ್ಲಿ ಎಂದಿದ್ದಾರೆ.
8) ಸದ್ಯ ಪರಿಸ್ಥಿಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಪ್ರತಿಕ್ರಿಯಿಸಿದ್ದು ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಶಿವಸೇನೆಯ ಆಂತರಿಕ ಕಚ್ಚಾಟದಿಂದಾಗಿ ಹೊರತು ನಮ್ಮಿಂದಲ್ಲ. ನಾವು ಸರ್ಕಾರ ರಚಿಸುವ ಬಗ್ಗೆ ಹಕ್ಕು ಮಂಡಿಸಿಲ್ಲ ಹಾಗು ಬಂಡಾಯ ನಾಯಕ ಏಕನಾಥ್ ಶಿಂಧೆರನ್ನು ಭೇಟಿ ಮಾಡಿಲ್ಲ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ಪಾಟೀಲ್ ದಾನ್ವೆ ತಿಳಿಸಿದ್ದಾರೆ.
9) ಶಿವಸೇನೆಗೆ ತಟ್ಟಿರುವ ಬಂಡಾಯ ಬಿಸಿ ಇದೇ ಮೊದಲಲ್ಲ ಈ ಹಿಂದೆ ಬಾಳಾ ಠಾಕ್ರೆ ಜೀವಂತವಿದ್ದ ಸಮಯದಲ್ಲಿ ಅಂದಿನ ಕಾಲಘಟ್ಟದ ಪ್ರಮುಖ ನಾಯಕರಿಂದ ಬಂಡಾಯದ ಬಿಸಿ ತಟ್ಟಿದೆ.
10) ಇನ್ನು ಮಹತ್ತರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ವಕ್ತಾರ ಸಂಜಯ್ ರಾವುತ್ ಒಂದು ವೇಳೆ ಬಂಡಾಯ ಶಾಸಕರು ನಮ್ಮ ಜೊತೆ ಮಾತುಕತೆ ನಡಿಸಿದ್ದರೆ ನಾವು ಮಹಾ ವಿಕಾಸ್ ಅಘಾಡಿ ಮೈತ್ರಿಯನ್ನು ತೊರೆಯಲು ಸಿದ್ದರಿದ್ದೇವೆ ಎಂದಿದ್ದಾರೆ.