ಒಂಟಿ ಕಾಲಿನಲ್ಲಿ 10 ಸೆಕೆಂಡ್ ನಿಲ್ಲಲು ಸಾಧ್ಯವಿಲ್ಲವೇ? ಹಾಗಾದರೆ ನಿಮ್ಮ ಸಾವು ಸಮೀಪದಲ್ಲಿಯೇ ಇದೆ ಎಂದು ಅರ್ಥ ಎಂದು ಸಮೀಕ್ಷೆಯೊಂದು ಆಘಾತಕಾರಿ ವರದಿಯಲ್ಲಿ ಎಚ್ಚರಿಸಿದೆ.
ಒಂಟಿ ಕಾಲಿನಲ್ಲಿ 10 ಸೆಕೆಂಡ್ ಗಳ ಕಾಲ ತಮ್ಮ ದೇಹದ ಸಮತೋಲನ ಕಾಯ್ದುಕೊಳ್ಳಲು ವಿಫಲರಾದವರು ಸಾಮಾನ್ಯವಾಗಿ 10 ವರ್ಷಗಳಲ್ಲಿ ಮೃತಪಟ್ಟಿರುವ ಆಘಾತಕಾರಿ ವಿಷಯವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಯಾರು 10 ಸೆಕೆಂಡ್ ಮೇಲೆ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದ ಮಧ್ಯವಯಸ್ಕರ ಪೈಕಿ ಶೇ.84ರಷ್ಟು ಜನರು 10 ವರ್ಷದಲ್ಲಿ ಮೃತಪಟ್ಟಿದ್ದಾರೆ.
2009ರಿಂದ ಬ್ರೆಜಿಲ್ ನಲ್ಲಿ 1750 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದೇ ಇದ್ದ ಶೇ.84ರಷ್ಟು ಮಂದಿ ವಿವಿಧ ಕಾಯಿಲೆ ಹಾಗೂ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ.