ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ಧ. ಇದನ್ನು ನಾನು ಒಪ್ಪುವುದಿಲ್ಲ. ಇದು ಅತ್ಯಂತ ಅಸಹ್ಯವಾದ ಪ್ರಕ್ರಿಯೆಯಾಗಿದ್ದು, ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಎಂದು TGBTQ ಸಮುದಾಯವನ್ನು ಅವಹೇಳನ ಮಾಡುವಂತಾ ಹೇಳಿಕೆ ನೀಡಿದ್ದಾರೆ.
ಹೌದು, ಸಲಿಂಗಿ ವಿವಾಹ ಕುರಿತಾಗಿ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಸಲಿಂಗಿ ಮದುವೆ ಬೇಡ. ಇದೊಂದು ಸೃಷ್ಟಿಗೆ ವಿರುದ್ಧ ಪ್ರಕ್ರಿಯೆ ಹಾಗಾಗಿ ಇದಕ್ಕೆ ಕಾನೂನು ಮುದ್ರೆ ಸರಿಯಲ್ಲ ಎಂದಿದ್ದಾರೆ.

ಸಂಗಿಂಗ ವಿವಾಹದ ವಿರುದ್ಧ ಕೇಂದ್ರ ವಾದವನ್ನು ಮಂಡಿಸಿದ್ದು, ಕೇಂದ್ರ ಸರ್ಕಾರದ ನಿಲುವು ಸರಿಯಿದೆ. ಸೃಷ್ಟಿಯ ವಿರುದ್ಧ ಕ್ರಿಯೆಗೆ ಕಾನೂನು ಜಾಗ ಮಾಡಿಕೊಡಬಾರದು. ಮದುವೆ ಪವಿತ್ರವಾದ ಬಂಧನ, ಅದಕ್ಕೆ ಕಳಂಕ ಬೇಡೆ ಎಂದು ಹೇಳಿದ್ದಾರೆ.






