ಸಿಎಂ ಸಿದ್ದರಾಮಯ್ಯಗೆ (Cm siddaramaiah) ಸೈಯ್ಯದ್ ಅಕ್ಬರ್,ಹುಸೇನ್ ಎಂಬ ಮುಸ್ಲಿಂ ಮುಖಂಡರು ಪತ್ರ ಬರೆದಿದ್ದು ರಂಜಾನ್ (Ramzan) ವೇಳೆಯಲ್ಲಿ ಮುಸಲ್ಮಾನ್ ಬಾಂಧವರಿಗೆ ಉದ್ಯೋಗದ ಅವಧಿಯಲ್ಲಿ ವಿನಾಯಿತಿ ನೀಡಬೇಕೆಂದು ಕೋರಿಕೊಂದಿದ್ದಾರೆ.

ಇನ್ನೇನು ರಂಜಾನ್ ಮಾಸ ಹತ್ತಿರ ಬರುತ್ತಿದೆ. ಮುಸ್ಲಿಮರು ರಂಜಾನ್ ವೇಳೆ ಒಂದು ತಿಂಗಳು ಉಪವಾಸ ಇರ್ತಾರೆ. ಹಾಗಾಗಿ ನಮ್ಮ ಸರ್ಕಾರಿ ನೌಕರರಿಗೆ ವಿನಾಯ್ತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಸಂಜೆ ೪ ರನಂತರ ಇಫ್ತಿಯಾರ್ ಗೆ ಅವಕಾಶ ಕೊಡಿ.ಸಮುದಾಯದ ಸರ್ಕಾರಿ ನೌಕರರಿಗೆ ಅನುಮತಿ ನೀಡಬೇಕು.ಈಗಾಗಲೇ ಆಂಧ್ರ, ತೆಲಂಗಾಣ ಸರ್ಕಾರಗಳು ಈ ವಿನಾಯಿತಿಯನ್ನು ನೀಡಿವೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.