ಹಿಂದೂ (Hindu Man) ವ್ಯಕ್ತಿಯೊಬ್ಬರ ಹಣೆಗೆ ತಿಲಕವಿಟ್ಟ ಕಾರಣಕ್ಕೆ ಮುಸ್ಲಿಂ (Muslim Family) ಕುಟುಂಬವೊಂದನ್ನ, ಮುಸ್ಲಿಂ ಸಮುದಾಯ ಬಹಿಷ್ಕರಿಸಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ ಸಂತ್ರಸ್ತ ಆರೀಫ್ ಶಾ (Arif Shah) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಿಂಗ್ (filed A complaint) ಬಳಿ ದೂರು ಸಲ್ಲಿಸಿದ್ದಾರೆ.

ಇನ್ನು ಈ ದೂರಿನ ಅನ್ವಯ ಕ್ರಮಕ್ಕೆ ಮುಂದಾಗಿದ್ದ ಎಸ್ಪಿ ರಾಕೇಶ್ ಕುಮಾರ್ ಸಿಂಗ್ (Rakesh Kumar Singh), ಆರೀಫ್ ವಿರುದ್ಧ ಇನ್ನಷ್ಟು ಬಹಿಷ್ಕಾರದ ಕೆಲಸ ಮಾಡಿದರೆ ಕಾನೂನು ರೀತಿಯಾದ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನ ನೀಡೋದರ ಜೊತೆಗೆ, ಕೋಮು ಸಾಮರಸ್ಯವನ್ನ ಬೆಳೆಸುವ ಕೆಲಸವನ್ನ ಮಾಡಿ ಎಂದು ಮುಸ್ಲಿಂ ಸಮುದಾಯದ ಮುಖಂಡರಿಗೆ ಮನವಿಯನ್ನ ಕೂಡ ಮಾಡಿದ್ದಾರೆ. ಇನ್ನು ಈ ಬಹಿಷ್ಕಾರಕ್ಕೆ ಪ್ರಮುಖವಾದ ಕಾರಣ ಅಂದ್ರೆ ಚುನಾವಣೆ ಸಂದರ್ಭದಲ್ಲಿ ತನ್ನ ಪಕ್ಕದ ಮನೆಯ ಹಿಂದೂಗಳೊಂದಿಗೆ ಮಾತನಾಡುತ್ತಿದ್ದಆರೀಫ್, ಈ ವೇಳೆ ತಮ್ಮ ನೆರೆಹೊರೆಯ ಮಂದಿಯ ಹಣೆಗೆ ತಿಲಕವಿಟ್ಟು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದ್ರು, ಆದ್ರೆ ಇದು ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದಾದ ಕೆಲ ದಿನಗಳಲ್ಲೇ ತಮ್ಮ ಸಮುದಾಯವು ತಾನು ಆಚರಿಸುವ ಕಾರ್ಯಕ್ರಮಗಳು ಹಾಗೂ ಹಬ್ಬಗಳ ಆಚರಣೆಗೆ ಅವಕಾಶವನ್ನ ಕೂಡದೇ ತಮಗೆ ಮಾನಸಿಕ ಕಿರಕುಳ ನೀಡಿದ್ದಾರೆ, ಅದರಲ್ಲೂ ಪ್ರಮುಖವಾಗಿ ತಮ್ಮ ಮನೆಯಲ್ಲಿ ತಾಯಿ ತೀರಿಕೊಂಡ ವೇಳೆ ಸಮುದಾಯದ ಯಾರೊಬ್ಬರೂ ಬರಲಿಲ್ಲ ಅಂತ ಆರಿಫ್ ಬೇಸರ ಮಾಡಿಕೊಂಡಿದ್ರು. ಇದೀಗ ಸಮುದಾಯದ ಮುಖಂಡರೊಂದಿಗೆ ಎಸ್ಪಿ ನೇತೃತ್ವದಲ್ಲಿ ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡಿಕೊಂಡಿರುವುದಾಗಿ ಆರಿಫ್ ತಿಳಿಸಿದ್ದಾರೆ. ಮುಂದೆ ಈ ರೀತಿ ಆಗದಂತೆ ಸಮುದಾಯದ ಮುಖಂಡರು ನೋಡಿಕೊಳ್ಳುವುದಾಗಿ ಹೇಳಿದ್ದಾರೆ ಅಂತ ಆರೀಫ್ ಹೇಳಿಕೊಂಡಿದ್ದಾರೆ..






