ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಲಿಂಗಾಯತ ಧರ್ಮಗುರು ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಈಗ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡಿದೆಯಂತೆ ಈ ಹಿನ್ನೆಲೆ ಜೈಲಿನಿಂದ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಎದೆ ನೋವಿನಿಂದ ಶ್ರೀಗಳು ಜೈಲಿನಲ್ಲಿ ಕುಸಿದು ಬಿದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ. ಬಿಳಿ ಮುಸಿಕಿನೊಂದಿಗೆ ಜೈಲಿನಿಂದ ಬಂದ ಶ್ರೀಗಳು ಪೊಲೀಸ್ ವಾನವೇರಿ ಪೊಲಿಸ್ ಸಿಬ್ಬಂದಿಯ ಜೊತೆಗೆ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ.
ಸದ್ಯ ಜೈಲಿನಲ್ಲಿ ಇಸಿಜಿ ತಪಾಸಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ, ಮೊಳಕಾಲ್ಕೂರು ಠಾಣೆ ಸಿಪಿಐ ಸತೀಶ್ ಅವರು ಮಠದಿಂದ ಶಿವಮೂರ್ತಿ ಅವರನ್ನು ನಿನ್ನೆ ರಾತ್ರೆ ಬಂಧಿಸಿ ಜೈಲಿನಲ್ಲಿ ಇರಿಸಿದ್ದರು.
ಇಂದು ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಚಾರಣೆ
ಅತ್ಯಾಚಾರಿ ಆರೋಪಿ ಮುರುಘಾ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ (ಸೆ.2) ಶುಕ್ರವಾರ ಇಂದು ನಡೆಸಲಿದೆ.