ಮುರುಘಾ ಮಠ ಶಿವರಾತ್ರಿ ಮುರುಘಾ ಶರಣರ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದಂತ ಪೋಕ್ಸೋ ಕೇಸ್ ಪ್ರಕರಣವನ್ನು ಇದೀಗ, ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ನಿನ್ನೆ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾ ಮಠ ಸ್ವಾಮೀ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಮೇಲೆ ಮಕ್ಕಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಶರಣರ ವಿರುದ್ಧ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದರೇ, ವಾರ್ಡನ್ ಎರಡನೇ ಆರೋಪಿಯನ್ನಾಗಿದ್ದು ಇನ್ನು ಮೈವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಬ್ಬರು ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಮಾಡುತ್ತಿರೋದಾಗಿ ದೂರಿನಲ್ಲಿ ಉಲ್ಲೇಘಿಸಲಾಗಿದೆ. ಇದಕ್ಕೆ ಸಹಕರಿಸಿದಂತ ಉಳಿದ ಆರೋಪಿಗಳ ಬಗ್ಗೆಯೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತ ಸಮಾಲೋಚನೆ ಸಮಯದಲ್ಲಿ ವಿದ್ಯಾರ್ಥಿನಿಯರು ಹೇಳಿಕೆ ಆದರಿಸಿ ದೂರು ಸಲ್ಲಿಸಲಾಗಿತ್ತು.
ಇತ್ತ ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಠದ ಹಾಸ್ಟೆಲ್ ಮಹಿಳಾ ವಾರ್ಡನ್ ಇದೀಗ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ. ಇದರ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನ್ನನ್ನು ಅತ್ಯಾಚಾರ ಮಾಡಲು ಬಸವರಾಜನ್ ಯತ್ನಿಸಿದ್ದಾರೆಂದು ವಾರ್ಡನ್ ಆರೋಪಿಸಿದ್ದಾರೆ.