ಚಿತ್ರದುರ್ಗ ಮುರುಘಾ ಮಠದದ ಶ್ರೀಗಳ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಶ್ರೀಗಳ ಮೇಲೆ ಪ್ರಕರಣ ಪ್ರಕರಣ ದಾಖಲಾಗಿರುವುದು ತಪ್ಪು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಮೊದಲು ವಿಸ್ತ್ರತವಾಗಿ ತನಿಖೆಯಾಗಬೇಕು.ಮುರುಘಾ ಸ್ವಾಮಿಗಳು ಯಾವತ್ತೂ ಪರಿವರ್ತನೆಗಾಗಿ ಹೋರಾಟ ಮಾಡಿಕೊಂಡು ಬಂದವರು. ಪರಿವರ್ತನೆ ಮಾಡುವಂತವರ ಹಣೆ ಮೇಲೆ ಯಾವತ್ತೂ ಕತ್ತಿ ತೂಗುತ್ತಾ ಇರುತ್ತದೆ. ಮೊದಲು ತನಿಖೆ ನಡೆಯಲಿ. ಸತ್ಯಾಂಶ ಏನಿದೆ ಎನ್ನುವುದು ಕಂಡು ಬಂದರೆ ಆಮೇಲೆ ಬೇಕಾದರೆ ಕ್ರಮಕೈಗೊಳ್ಳಲಿ ಎಂದಿದ್ದಾರೆ.

ಮುಂದುವರೆದು, ಈ ಘಟನೆ ಅವರ ಭಕ್ತರಲ್ಲಿ ಆತಂಕವನ್ನು ಸೃಷ್ಟಿ ಮಾಡಬಹುದು. ಸಿಎಂ ಬೊಮ್ಮಾಯಿ ಅವರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.













