ದರ್ಶನ್ (Darshan) ಬಂಧನ ಬೆನ್ನಲ್ಲೇ ಮತ್ತೊಬ್ಬ ನಟನಿಗೆ ಇದೀಗ ಢವ ಢವ ಶುರುವಾಗಿದೆ. ಶನಿವಾರ ಮಧ್ಯಾಹ್ನದಿಂದ ವಿನಯ್ (Vinay) ಒಡೆತನದ ಸ್ಟೋನಿಬ್ರೂಕ್ ದರ್ಶನ್ ಅಂಡ್ ಟೀಂ ನಲ್ಲಿ ಪಾರ್ಟಿ ಮಾಡಿದ್ದರು.
ಈ ವೇಳೆ ದರ್ಶನ್ ಜೊತೆ ಪಾರ್ಟಿಯಲ್ಲೇ ಈ ಸ್ಟಾರ್ ನಟ (Star actor) ಕೂಡ ಇದ್ರಂತೆ. ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಅಂತಾ ಎದ್ದು ಹೊರಟಿದ್ದರಂತೆ ದರ್ಶನ್. ಇದೀಗ ದರ್ಶನ್ ಬಂಧನದಿಂದ ಸ್ಟಾರ್ ನಟನ ಎದೆಯಲ್ಲಿ ಢವ ಢವ ಶುರುವಾಗಿದೆ.
ಯಾವುದೇ ಕ್ಷಣದಲ್ಲಾದ್ರು ಕಾಮಾಕ್ಷಿಪಾಳ್ಯ ಪೊಲೀಸ್ರು ಸಂಪರ್ಕಿಸಬಹುದು ಅನ್ನೊ ಭಯದಲ್ಲಿರೋ ನಟನಿಗೆ ನೋಟಿಸ್ ಕೊಡುವ ಚಿಂತನೆಯಲ್ಲಿ ಸದ್ಯ ಪೊಲೀಸ್ರು ತಯಾರಿ ನಡೆಸಿದ್ದಾರಂತೆ. ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್ ನಲ್ಲಿ ಏನಾದ್ರು ಚರ್ಚೆಯಾಗಿತ್ತಾ ಅಂತಾ ಮಾಹಿತಿ ಪಡೆಯುವ ಸಾಧ್ಯತೆ ಇದೆ.