ಮುಂಬೈ ಶೀಘ್ರದಲ್ಲೇ 900 ಹೊಸ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯಲಿದೆ. ಪ್ರಸ್ತುತವಾಗಿ 48 ಡಬಲ್ ಡೆಕ್ಕರ್ ಬಸ್‌ಗಳಿಂದ ದೊಡ್ಡ ನವೀಕರಣವಾಗಲಿದೆ.
ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಮಿತಿ (The Brihanmumbai Electricity Supply and Transport – BEST) ಇತ್ತೀಚೆಗೆ 900 ಹವಾನಿಯಂತ್ರಿತ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರಿತವಾಗಿ ಪರಿಚಯಿಸಲು ಅನುಮೋದಿಸಿದೆ.
ಆದಾಗ್ಯೂ, ಕೆಲವು ಸುದ್ದಿ ವರದಿಗಳ ಪ್ರಕಾರ ನಾಲ್ಕು ಬಸ್ ತಯಾರಕರು 200 ಡಬಲ್ ಡೆಕ್ಕರ್ ಎಸಿ ಬಸ್‌ಗಳನ್ನು ತರಲು ಆಸಕ್ತಿ ತೋರಿಸಿದ್ದಾರೆ. ಮಾರ್ಚ್ 2023 ರ ವೇಳೆಗೆ ಶೇ. 50 ರಷ್ಟು ಎಲೆಕ್ಟ್ರಿಕ್ ಬಸ್ ಗಳನ್ನು ಹೊಂದುವ ಗುರಿಯನ್ನು ಹೊಂದಲಾಗಿದ್ದು, ಮಾರ್ಚ್ 2027 ರ ವೇಳೆಗೆ ಇನ್ನೂ ಹೆಚ್ಚಿನ ಬಸ್ ಗಳನ್ನು ಆವಿಷ್ಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
1,400 ಸಿಂಗಲ್-ಡೆಕ್ಕರ್ ಎಸಿ ಇ-ಬಸ್ ಗಳು, 400 ಮಿಡಿ ಎಸಿ ಇ-ಬಸ್ಗಳು ಮತ್ತು 100 ಮಿನಿ ಎಸಿ ಇ-ಬಸ್ ಗಳನ್ನು ತರಲು ಯೋಜಿಸಲಾಗಿದೆ. 925 ಕೋಟಿಗಿಂತಲೂ ಹೆಚ್ಚು ಮೊತ್ತದ ಹಣವನ್ನು ಒದಗಿಸಲಾಗಿದ್ದು, ಪ್ರತಿ ಕಿ.ಮೀ. 56 ರೂ.ಗೆ ಓಡಿಸುವುದಾಗಿ ಕೆಲವರು ಭರವಸೆ ನೀಡಿದ್ದಾರೆ.
ಸಿಂಗಲ್ ಡೆಕ್ಕರ್ ಎಸಿ ಇ-ಬಸ್ ಗಳು ಕಿ.ಮೀಗೆ 54-72 ರೂ.ಗೆ ಕಾರ್ಯನಿರ್ವಹಿಸುತ್ತಿರುವಾಗ ಕಡಿಮೆ ವೆಚ್ಚದಲ್ಲಿ ಡಬಲ್ ಡೆಕ್ಕರ್ ಬಸ್ಗಳನ್ನು ಓಡಿಸುವುದು ಆಶ್ಚರ್ಯಕರ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.