ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಪತ್ನಿ 14 ಸೈಟ್ ಪಡೆದಿದ್ದ ಪ್ರಕರಣದಲ್ಲಿ ಇಡಿ ಅಧಿಕಾತಿಗಳು ವಿಧಾನಸೌಧ ತಲುಪಿದ್ದಾರೆ. ಸಮಗ್ರವಾಗಿ ತನಿಖೆ ಮಾಡ್ತಿರೋ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ, ಸಿಎಂ ವಿಚಾರಣೆಗೂ ಮುನ್ನ ನಗಾರಭಿವೃದ್ಧಿ ಇಲಾಖೆ ಸಚಿವರ ಮೇಲೆ ಕಣ್ಣಿಟ್ಟಿದೆ.
ಪ್ರಕರಣದ ತನಿಖೆ ವಿಧಾನಸೌಧಕ್ಕೆ ತಲುಪಿದ್ದು, ಸಚಿವ ಬೈರತಿ ಸುರೇಶ್ ಕಚೇರಿಗೂ ತಲುಪಿದ್ದಾರೆ ಇಡಿ ಇಲಾಖೆ ಅಧಿಕಾರಿಗಳು. ಬೈರತಿ ಸುರೇಶ್ ಇಲಾಖೆಯಲ್ಲಿ ಕೆಲಸ ಮಾಡೋ ಅಧಿಕಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಮನ್ಸ್ ನೀಡಿದ್ದಾರೆ ಇಡಿ ಅಧಿಕಾರಿಗಳು.
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಮನ್ಸ್ ನೀಡಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ. ಮುಡಾ ನಗರಾಭಿವೃದ್ದಿ ಇಲಾಖೆಯಲ್ಲಿ ಬರುವ ಹಿನ್ನೆಲೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಲು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.