ಮುಡಾ (MUDA scam) ಅಕ್ರಮದ ದಾಖಲೆಗಳನ್ನು ನಾಶ ಮಾಡಲಾಗುತ್ತಿದೆ, ಹಗರಣ ಮುಚ್ಚಿ ಹಾಕಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಇ ಬಗ್ಗೆ ಮಾತನಾಡಿದ ಡಿಕೆಶಿ (Dks), ಯಾರು ಯಾವುದನ್ನು ಮುಚ್ಚಿ ಹಾಕಬೇಕಾಗಿಲ್ಲ, ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ ಅನ್ಯಾಯವೂ ಆಗಿಲ್ಲ. ಆಸ್ತಿ ಕಳೆದುಕೊಂಡವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಡಾ ನಿಯಮದಂತೆ ಪರಿಹಾರ ನೀಡಲಾಗುತ್ತದೆ. ಬಿಡಿಎನಲ್ಲಿ ಶೇಕಡ 60:40 ಅನುಪಾತ ಇದ್ದು ಮೂಡಾದಲ್ಲಿ 50:50 ಅನುಪಾತದಲ್ಲಿ ಪರಿಹಾರ ನೀಡುವಂತೆ ಕಾನೂನು ಮಾಡಿಕೊಂಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರವೇ ಪರಿಹಾರ ನೀಡಲಾಗಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯನ (CM Siddaramaiah) ಚುನಾವಣಾ ಅಫಿಡವಿಟ್‌ನಲ್ಲಿ ಕೂಡ ತಮ್ಮ ಪತ್ನಿಗೆ ಬಂದಿರುವ ಆಸ್ತಿಗಳ ಬಗ್ಗೆ ವಿವರಗಳನ್ನ ನೀಡಿದ್ದಾರೆ ಎಂದು ಡಿಸಿಎಂ ಡಿಕೆಶಿ (Dcm dk shivakumar) ಸಿದ್ದು ಪರವಾಗಿ ಬ್ಯಾಟ್ ಬೀಸಿದ್ದಾರೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವ ಹೆಚ್‌ಡಿಕೆ (HD kumaraswamy) ಪರೋಕ್ಷವಾಗಿ ಈ ಹಗರಣ ಹೊರಬರಲು ಡಿಕೆಶಿ ಕಾರಣ ಎಂದು ಹೇಳಿದ್ದರು. ಇದೀಗ ಡಿಕೆಶಿ ಸಿಎಂ ಪರವಾಗಿ ಹೇಳಿಕೆ ಕೊಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ.