ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ಸೈಟ್ ಪಡೆದವರಿಗೆ ಈಗ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರ 14 ಸೈಟ್ ಗಳ ಪ್ರಕರಣದಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಮುಡಾದಿಂದ ಈ ಹಿಂದೆ 50:50 ಅನುಪಾತದಡಿ ಯಾರಿಗೆಲ್ಲ ಸೈಟ್ ಹಂಚಿಕೆ ಮಾಡಲಾಗಿದ್ಯೋ,ಆ ಎಲ್ಲಾ ಸೈಟ್‌ಗಳನ್ನು ಹಿಂಪಡೆಯಲು ಮುಡಾದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹೀಗಾಗಿ ಮುಡಾದ ಈ ನಿರ್ಧಾರದಿಂದ 5,000ಕ್ಕೂ ಹೆಚ್ಚು ಸೈಟ್‌ಗಳ ನೋಂದಣಿ ರದ್ದಾಗುವ ಸಾಧ್ಯತೆಯಿದೆ.
ಕಳೆದ ನಾಲ್ಕು ವರ್ಷಗಳಿಂದ, ಅಂದ್ರೆ 2020ರ ಬಳಿಕ ಮುಡಾದಿಂದ ಹಂಚಿಕೆಯಾದ ಎಲ್ಲಾ ನಿವೇಶನಗಳನ್ನು ಮರಳಿ ಹಿಂಪಡೆಯುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಈ ರೀತಿ ಸೈಟ್ ವಾಪಸ್ ಪಡೆಯುವ ನಿರ್ಧಾರಕ್ಕೆ ಮುಡಾ ಸಾಮಾನ್ಯ ಸಭೆಯಲ್ಲಿದ್ದ ಎಲ್ಲಾ ಸದಸ್ಯರೂ ಒಪ್ಪಿಗೆ ಸೂಚಿಸಿದ್ದು,ಈ ನಿಯಮದ ಅನ್ವಯ ಸೈಟ್ ಪಡೆದವರಿಗೆ ಈಗ ಢವ ಢವ ಶುರುವಾಗಿದೆ.