ಬೆಳಗಾವಿ (Belagavi) ಲೋಕಸಭಾ ಚುನಾವಣೆ ಅಖಾಡ ರಂಗೇರಿದೆ. ಗ್ರಾಮ ಗ್ರಾಮಗಳಿಗೆ ಸುತ್ತಾಡಿ ಕಾಂಗ್ರೆಸ್ (congress) ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಳರ್ (mrunal hebbalkar) ಮತಭೇಟಿಗೆ ಮುಂದಾಗಿದ್ದಾರೆ. ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಬಹಳ ಒಳ್ಳೆಯ ರೆಸ್ಪಾನ್ಸ್ ಇದೆ. ಪ್ರತಿಯೊಂದು ಕಡೆ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಹೇಳಿದ್ರು.
ತಾವು ಮಾಜಿ ಮುಖ್ಯಮಂತ್ರಿಗಳು, ನಮ್ಮ ಜಿಲ್ಲೆಗೆ ಏನಾದರೂ ಮಾಡಿದ್ದಾರಾ ಎಂದು ಜಗದೀಶ ಶೆಟ್ಟರ್ (lagadeesh shettar) ಮೃಣಾಲ್ ಪ್ರಶ್ನೆ ಮಾಡಿದ್ದಾರೆ. ಅಥವಾ ನಂತರದಲ್ಲಿ ಇಂಡಸ್ಟ್ರಿಯಲ್ ಸಚಿವರು (industrial minister) ಕೂಡ ಆಗಿದ್ದವರು, ಆಗಲಾದ್ರೂ ನಮ್ಮ ಬೆಳಗಾವಿಗೆ ಇಂಡಸ್ಟ್ರಿಯಲ್ ಏನಾದರೂ ಅಭಿವೃದ್ಧಿ ಮಾಡಿದ್ದಾರಾ ಎನ್ನುವ ಪ್ರಶ್ನೆಗಳನ್ನ ಜಗದೀಶ್ ಶೆಟ್ಟರ್ ಮುಂದಿಟ್ಟಿದ್ದಾರೆ.
ನಮ್ಮ ಸ್ಥಳೀಯ ಜನತೆಗೆ 20 ವರ್ಷದಿಂದ (20 years) ನಿಮ್ಮ ಎಂಪಿಗಳು ನೀವು ಏನೇ ಕೊಡುಗೆ ಕೊಟ್ಟಿದೀರಾ ? ನಮ್ಮ ಜಿಲ್ಲೆ ಸ್ಮಾರ್ಟ್ (Smart) ಆಗಿದೇಯಾ, ಯುವಕರಿಗೆ ಕೆಲಸ ಕೊಟ್ಟಿದೀರಾ ಎಂದೆಲ್ಲಾ ಪ್ರಶ್ನೆಗಳ ಸಾಲನ್ನು ಬಿಜೆಪಿಗರ (Bjp) ಮುಂದಿಟ್ಟಿದ್ದಾರೆ. ಇದು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಹುಟ್ಟಿದ ಊರು,ಮಹಾತ್ಮ ಗಾಂಧಿ ಬಂದು ಹೋಗಿರುವ ಜಿಲ್ಲೆ ಆಗಿದೆ. ಹೊರಗಡೆಯಿಂದ ಬಂದು ನಮ್ಮ ಜನರನ್ನ ಆಳಬೇಕಾಗಿರುವ ಅವಶ್ಯಕತೆ ಇಲ್ಲಾ ಎಂದು ಮೃಣಾಲ್ ಸ್ವಾಭಿಮಾನಿ ಅಸ್ತ್ರ ಪ್ರಯೋಗ ಮಾಡಿದ್ದಾರೆ.