ಕೆಳೆದ ಕೆಲವು ವರ್ಷಗಳಿಂದ ಯಾಕೋ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಸರಿ ಇಲ್ಲದಂತೆ ಕಾಣುತ್ತಿಲ್ಲ ಒಂದು ಕಾಲದಲ್ಲಿ ಪಕ್ಷದಲ್ಲಿ ಕೇಂದ್ರಿಕೃತವಾಗಿಂದತಹ ವ್ಯಕ್ತಿಗಳು ಇಂದು ಪಕ್ಷದ ಆಂತರಿಕ ಕಚ್ಚಾಟದಿಂದ ಬೇಸತ್ತು ಬಹಿರಂಗವಾಗಿ ಗುಡುಗಲು ಶುರು ಮಾಡಿದ್ದಾರೆ.
ಅವರ ಸಾಲಿಗೆ ಮಾಜಿ ಸಚಿವ ಎಂ.ಆರ್.ಸೀತಾರಾಂ ಹೊಸ ಸೇರ್ಪಡೆಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಬೆಯಲ್ಲಿ ಸೀತಾರಂ ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಕೆಂಡಕಾರಿದ್ದಾರೆ.
ಬಲಿಜ ಸಮಾಜಕದವರಾದ ಸೀತಾರಾಂ ತಮ್ಮನ್ನು ಹಾಗು ತಮ್ಮ ಪುತ್ರ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯರನ್ನು ಕಡೆಗಣಿಸಲಾಗಿದೆ ಅದು ನಾಲ್ಕು ಭಾರೀ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ಕಾಂಗ್ರೆಸ್ ಒಳ್ಳೆಯ ಪಕ್ಷ ಆದರೆ ಅದರ ಚುಕ್ಕಾಣಿ ಹಿಡಿದಿರುವವರು ಒಳ್ಳೆಯವರಲ್ಲ 1984 ರಿಂದ ಇಲ್ಲಿಯವರೆಗು ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತ ಬಂದಿದ್ದೇನೆ ನನ್ನಗೆ ಒಟ್ಟಾರೆ ನಾಲ್ಕು ಭಾರೀ ಅನ್ಯಾತ ಮಾಡಲಾಗಿದೆ. ಮುಂದಿನ ತಿಂಗಳು ಬೃಹತ್ ಸಮಾವೇಶವನ್ನ ಆಯೋಜಿಸಿ ನನ್ನ ಮುಂದಿನ ನಡೆಯನ್ನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ತಮ್ಮಗಾದಂತೆ ಅನೇಕರಿಗೆ ಅನ್ಯಾಯವಾಗಿದೆ. ತಮ್ಮ ಪುತ್ರ ರಕ್ಷಾ ರಾಮಯ್ಯಗು ಇದು ಹೊರತಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮಗನ ಎದುರು ಯುವ ಕಾಂಗ್ರೆಸ್ ಚುನಾವಣೇಯಲ್ಲಿ ಸ್ಪರ್ಧಿಸಿದ್ದ ವ್ಯಕ್ತಿಯನ್ನು ಪಕ್ಷದಿಂದ ಉಚ್ಚಾಟಿಸಿ ಅನರ್ಹಗೊಳಿಸಲಾಗಿತ್ತು ಆದರೆ, ಪ್ರಸ್ತುತ ಅಧ್ಯಕ್ಷರಾಗಿರುವಂತಹವರು ಒತ್ತಡ ಹೇರಿ ನಾಮಪತ್ರವನ್ನ ಅಂಗೀರಿಸುವಂತೆ ಮಾಡಿದ್ದಾರೆ. ಒಮ್ಮೆ ನಾಮಪತ್ರ ತಿರಸ್ಕೃತವಾದರೆ ಅದನ್ನು ಸ್ವೀಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಭಾರೀ ಗೆದಿದ್ದ ನನ್ನಗೆ 2008ರಲ್ಲಿ ವಿಶ್ವಾಸ ದ್ರೋಹವಾಯಿತ್ತು. 2018ರಲ್ಲಿ ಚುನಾವಣೆ ಘೋಷಣೆಯಾದ ಬಳಿಕ ನನ್ನಗೆ ಸ್ಪರ್ಧಿಸುವಂತೆ ಸೂಚಿಸಲಾಯಿತ್ತು. ಆದರೆ, ದಶಕಗಳ ಕಾಲ ಜನರಿಂದ ದೂರವಿದ್ದ ಕಾರಣ ಏಕಾಏಕಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿ ಟಿಕೆಟ್ ನಿರಾಕರಿಸಿದೆ ಎಂದಿದ್ದಾರೆ.
2009 ಲೋಕಸಭೆ ಚುನಾವಣೆ ವೇಳೆ ಮೊದಲು ನನ್ನಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಹೇಳಿದ್ದರು ನಾನು ಪಕ್ಷದ ಅಣತಿಯಂತೆ ತಯಾರಿ ಮಾಡಿಕೊಂಡಿದೆ ಆದರೆ, ಕಡೇ ಕ್ಷಣದಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಲಸೆ ಬಂದ ಕಾರಣ ಅವರಿಗೆ ಟಿಕೆಟ್ ನೀಡಿದ್ದರು ಎಂದು ಕಿಡಿಕಾರಿದ್ದಾರೆ.
ಸದ್ಯ ಪಕ್ಷದ ಅಧ್ಯಕ್ಷರಾಗಿರುವಂತವರು ಹಾಗು ನಾನು ಸಮಕಾಲೀನರು ನನ್ನಗೆ ಇತ್ತೀಚಿಗೆ ನಡೆದ ಮೇಲ್ಮನೆ ಚುನಾವಣೆಗೆ ಟಿಕೆಟ್ ಕೊಡುತ್ತಾರೆ ಎಂದುಕೊಂಡಿದ್ದೆ ಆದರೆ, ಸೌಜನ್ಯಕ್ಕು ಸಹ ನನ್ನನ್ನು ಸಂಪರ್ಕಿಸಿಲ್ಲ ನಾನು ಇಷ್ಟು ದಿನ ಪಕ್ಷದ ಒಳತಿಗಾಗಿ ಸೌಮ್ಯವಾಗಿ ನಡೆದುಕೊಂಡಿದ್ದೇನೆ ಇನ್ನು ಮುಂದೆ ಹಾಗಿರಲು ಸಾಧ್ಯವಿಲ್ಲ ಎಂದು ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ.
ಬಲಿಜ ಸಮುದಾಯವನ್ನ ಎದುರಾಕಿಕೊಳ್ಳುತ್ತಾ ಕಾಂಗ್ರೆಸ್ ?
ರಾಜ್ಯದ ಪ್ರತಿಷ್ಠಿತ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಿಜ ಸಮುದಾಯದ ಮತದಾರರು ಪ್ರಮುಖ ಪಾತ್ರವನ್ನ ವಹಿಸುತ್ತಾರೆ. ತುಮಕೂರು , ಚಿಕ್ಕಬಳ್ಳಾಪುರ ಹಾಗು ಕೋಲಾರದಲ್ಲಿ ನಿರ್ಣಾಯಕ ಎಂದೇ ಹೇಳಬಹುದು.
ರಾಜ್ಯ ಕಾಂಗ್ರೆಸ್ ನಿಂದ ಇದೇ ಧೋರಣೆ ಮುಂದುವರಿದರೆ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಮೇಯರ್ ಹುಚ್ಚಪ್ಪ ಹಾಗು ರಾಜ್ಯ ಬಲಿಜ ಜನಾಂಗದ ರಾಜ್ಯಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಸಮುದಾಯದ ಹಲವು ಮುಖಂಡರು ಭಾಗಿಯಾಗಿದ್ದರು.
ಮಡಿಕೇರಿ ಜಿಲ್ಲೆ ಒಂದರಿಂದಲ್ಲೇ ಸುಮಾರು 10 ಬಸ್ ಜನ ಬಂದಿದ್ದರು ಮಿಕ್ಕಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಗು ತುಮಕೂರಿನಿಂದ ಸಹಸ್ರಾರು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು.
ಇನ್ನು ಸೀತಾರಾಂ ನಿನ್ನೆ ಕಾಂಗ್ರೆಸ್ ವಿರುದ್ದ ಬಹಿರಂಗವಾಗಿ ಗುಡುಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಸೀತಾರಾಂರನ್ನು ಸಂಪರ್ಕಿಸಿ ಒಂದು ಸುತ್ತು ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ ಮುಂದಿನ ದಿನಗಳಲ್ಲಿ ಅವರ ನಡೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.












