• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮಧ್ಯಪ್ರದೇಶ: ಚಿರತೆಯೊಂದಗೆ ಸೆಣಸಾಡಿ ಮಗನನ್ನು ರಕ್ಷಿಸಿದ ಬುಡಕಟ್ಟು ಮಹಿಳೆ

ಪ್ರತಿಧ್ವನಿ by ಪ್ರತಿಧ್ವನಿ
December 1, 2021
in ದೇಶ
0
ಮಧ್ಯಪ್ರದೇಶ: ಚಿರತೆಯೊಂದಗೆ ಸೆಣಸಾಡಿ ಮಗನನ್ನು ರಕ್ಷಿಸಿದ ಬುಡಕಟ್ಟು ಮಹಿಳೆ
Share on WhatsAppShare on FacebookShare on Telegram

ಮಧ್ಯಪ್ರದೇಶದ ಬಡಿ ಜಾರಿಯಾ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯೊಬ್ಬರು ಚಿರತೆಯೊಂದಿಗೆ ತೀವ್ರ ಸೆಣಸಾಟದ ನಂತರ ತಮ್ಮ ಎಂಟು ವರ್ಷದ ಮಗನನ್ನು ಚಿರತೆಯಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಮಧ್ಯಪ್ರದೇಶದ ಭೋಪಾಲ್‌ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್‌ ಟೈಗರ್‌ ರಿಸರ್ವ್‌ನ ಬಫರ್‌ ವಲಯದಲ್ಲಿ ಈ ಘಟನೆ ನಡೆದಿದೆ.

ಬೈಗಾ ಬುಡಕಟ್ಟು ಜನಾಂಗಕ್ಕೆ ಸೇರಿದ ಕಿರಣ್‌ ಎಂಬ ಮಹಿಳೆ ಚಿರತೆಯೊಂದಿಗೆ ಸೆಣಸಾಡಿ ಇದೀಗ ಸುದ್ದಿಯಲ್ಲಿದ್ದಾರೆ. ಎಂದಿನಂತೆ ಮಹಿಳೆ ತಮ್ಮ ಮೂವರು ಮಕ್ಕಳೊಂದಿಗೆ ತಮ್ಮ ಗುಡಿಸಿಲಿನ ಹೊರಗೆ ಚಳಿಗೆ ಬೆಂಕಿ ಕಾಯಿಸಿಕೊಂಡು ಕುಳಿತಿದ್ದ ಸಮಯದಲ್ಲಿ ಇದ್ದಕ್ಕಿದಂತೆಯೇ ಚಿರತೆಯೊಂದು ಕಾಣಿಸಿಕೊಂಡಿದೆ. ನೋಡುವಷ್ಟರಲ್ಲಿ ಚಿರತೆಯು ತನ್ನ ಎಂಟು ವರ್ಷದ ಮಗನನ್ನು ಕಚ್ಚಿಕೊಂಡು ಹೋಗಿರುವುದನ್ನು ಕಿರಣ್‌ ನೋಡಿದ್ದಾರೆ. ಧೃತಿಗೆಡದೆ ತನ್ನ ಎರಡು ಮಕ್ಕಳನ್ನು ಗುಡಿಸಿಲಿನ ಒಳಗಡೆ ಇರುವಂತೆ ಹೇಳಿ ಚಿರತೆಯನ್ನು ಬೆನ್ನಟ್ಟಿ ತನ್ನ ಮಗನನ್ನು ರಕ್ಷಿಸಿದ್ದಾಳೆ. ಆಧರೆ, ಚಿರತೆ ಇಬ್ಬರ ಮೇಲೂ ದಾಳಿ ಮಾಡಿರುವ ಕಾರಣ ತಾಯಿ ಮತ್ತು ಮಗುವಿಗೆ ಗಾಯಗಳಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೀಗ ಮಹಿಳೆಯ ಶೌರ್ಯ ಪರಾಕ್ರಮವನ್ನ ಸ್ವತಃ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ರವರು ಟ್ವೀಟ್‌ ಮಾಡುವ ಮೂಲಕ ಮಹಿಳೆಯ ತೋರಿದ ಧೈರ್ಯವನ್ನ ಹಾಡಿ ಹೊಗಳಿದ್ದಾರೆ.

काल के हाथों से बच्चे को निकाल कर नया जीवन देने वाली मां को प्रणाम। प्रदेश के सीधी जिले में तेंदुए का एक किमी दूर पीछा कर मां अपने कलेजे के टुकड़े के लिए उससे भिड़ गईं। मौत से टकराने का ये साहस ममता का ही अद्भुत स्वरूप है। मां श्रीमती किरण बैगा का प्रदेशवासियों की तरफ से अभिनंदन। pic.twitter.com/46Uuc0srx0

— Shivraj Singh Chouhan (मोदी का परिवार ) (@ChouhanShivraj) November 30, 2021

ಈ ಬಗ್ಗೆ ಮಾತನಾಡಿರುವ ಅರಣ್ಯ ಅಧಿಕಾರಿ ವೈ.ಪಿ.ಸಿಂಗ್‌ ಮಹಿಳೆಯು ಘಟನೆಯ ಆಘಾತಕ್ಕೊಳಗಾಗಿದ್ದು ಆಕೆಗೆ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಮಹಹಿಳೆಯು ಚಿರತೆಯ್ನು ಸುಮಾರು ಒಂದು ಕಿಲೋಮೀಟರ್‌ಗೂ ದೂರ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಚಿರತೆಯು ಪೊದೆಯಲ್ಲಿ ಅಡಗಿ ಕುಳಿತುಕೊಂಡಿತ್ತು ಮತ್ತು ಮಹಿಳೆಯು ಚಿರತೆಯನನ್ನು ಬೆದರಿಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಚಿರತೆಯು ಮಹಿಳೆಯ ಧೈರ್ಯವನ್ನ ನೋಡಿ ಮಗುವನ್ನು ಕೆಳಗೆ ಬಿಟ್ಟಿದ್ದೆ. ಕಿರಣ್‌ ತನ್ನ ಮಗನನ್ನು ಎತ್ತಿಕೊಂಡಾಗ ಚಿರತೆಯು ಮಗು ಮತ್ತು ತಾಯಿ ಇಬ್ಬರ ಮೇಲೂ ದಾಳಿ ಮಾಡಿದೆ. ಆದರೆ, ಆಕೆ ದೈರ್ಯಗೆಡದೆ ಚಿರತೆಯನ್ನ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆಯೊಂದಿಗೆ ಕಾದಾಡುವ ಸಮಯದಲ್ಲಿ ಮಹಿಳೆ ತನ್ನ ರಕ್ಷಣೆಗಾಗಿ ಸಹಾಯಕ್ಕಾಗಿ ಕೂಗಿದ್ದಾಳೆ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ ಕೂಡಲೇ ಚಿರತೆ ಕಾಡಿನಲ್ಲಿ ಒಡಿಹೋಗಿದೆ. ದಾಳಿಯಲ್ಲಿ ಬಾಲಕನ ಕೆನ್ನೆ, ಬೆನ್ನು ಮತ್ತು ಕಣ್ಣುಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಕ್ಷಣವೇ ಬಫರ್‌ ರೇಂಜರ್‌ ಅಸೀಮ್‌ ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಆಕೆಯ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚವನ್ನು  ಅರಣ್ಯ ಇಲಾಖೆ ಕಡೆಯಿಂದ ಭರಿಸುವುದಾಗಿ ಹೇಳಿದ್ದಾರೆ.

Tags: MP tribal woman chases leopardrescues son after fight
Previous Post

ಲಜ್ಜೆಗೆಟ್ಟ ಕೇಂದ್ರ ಸರ್ಕಾರ ಕ್ರೌರ್ಯ: ಪ್ರತಿಭಟನಾನಿರತ ರೈತರು ಮೃತಪಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ, ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ!

Next Post

ಕೋವಿಡ್ ಹೆಚ್ಚುತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ, ಲಾಕ್ ಡೌನ್ ಪ್ರಸ್ತಾಪ ಇಲ್ಲ ; ಸಿ ಎಂ ಬೊಮ್ಮಯಿ

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
Next Post
ಕೋವಿಡ್ ಹೆಚ್ಚುತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ,  ಲಾಕ್ ಡೌನ್ ಪ್ರಸ್ತಾಪ ಇಲ್ಲ ; ಸಿ ಎಂ ಬೊಮ್ಮಯಿ

ಕೋವಿಡ್ ಹೆಚ್ಚುತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ, ಲಾಕ್ ಡೌನ್ ಪ್ರಸ್ತಾಪ ಇಲ್ಲ ; ಸಿ ಎಂ ಬೊಮ್ಮಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada