ಸಂಸದ ತೇಜಸ್ವಿ ಸೂರ್ಯಗೆ ಸಂಕಷ್ಟ ಎದುರಾಗಿದೆ.ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಗೆ ದೂರು ಕೊಡಲಾಗಿದ್ದು , ತಕ್ಷಣವೇ ತೇಜಸ್ವಿ ಸೂರ್ಯ ವಿರುದ್ಧ. ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.ನೀತಿ ಸಂಹಿತೆ ಜಾರಿ ಇದ್ರು ನಗರ್ತ್ ಪೇಟೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರೋ ಸಂಬಂಧ ದೂರು ಕೊಡಲಾಗಿದೆ.ನೀತಿ ಸಂಹಿತೆ ಜಾರಿ ಇದ್ರು ಹನುಮಾನ ಚಾಲೀಸ್ ಪಠಣೆ ಮಾಡೋಕೆ ಕರೆ ಕೊಟ್ಟಿದ್ದಾರೆ.ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಮೂಡಿಸುವ ಭಾಷಣ ಮಾಡಿದ್ದಾರೆ .ಜಿಲ್ಲಾ ಚುನಾವಣಾಧಿಕಾರಿಗಳಾಗಿ ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಬೇಕಿತ್ತು ಮಾಡಿಕೊಂಡಿಲ್ಲ.ಕೋಮು ದ್ವೇಷಕ್ಕೆ ದಾರಿ ಮಾಡಿಕೊಟ್ಟಿದ್ದೀರಾ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದ್ವೇಷದ ಮಾತಿನ ವಿರುದ್ಧ ಜನಾಂದೋಲನ ಸಂಘಟನೆಯಿಂದ ದೂರು ಕೊಡಲಾಗಿದೆ. ಬೆಂಗಳೂರಿನ ನಗರ್ತ್ ಪೇಟೆಯಲ್ಲಿ ಹನುಮ ಚಾಲೀಸಾ ಹಾಕಿದ್ದಕ್ಕೆ ದೊಡ್ಡ ಗಲಾಟೆ ನಡೆದಿತ್ತು. ಇದು ಹಿಂದೂ ಸಂಘಟನೆಯ ಕೆಂಗಣ್ಣಿಗೂ ಗುರಿಯಾಗಿತ್ತು. ಸಂಸದ ತೇಜಸ್ವಿ ಸೂರ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಜನರು ಪ್ರೊಟೆಸ್ಟ್ ನಡೆಸೋಕೆ ಮುಂದಾಗಿದ್ರು. ಇದೀಗ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಎಂದು ಆರೋಪಿಸಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ.
