ಉತ್ತರ ಕನ್ನಡ: ಇಂದಿರಾ ಗಾಂಧೀ(Indira Gandhi) ಕುಟುಂಬದ ದುರಂತ ಅಂತ್ಯಕ್ಕೆ ಸಂತರ ಶಾಪವೇ ಕಾರಣ? ಹೀಗೆಂದು ಹೇಳಿಕೆ ನೀಡಿದ್ದು ಬಿಜೆಪಿ ಸಂಸದ(BJP MP) ಅನಂತ ಕುಮಾರ ಹೆಗಡೆ(Ananth kumara Hegde).
ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಇಂದು ನಡೆದ ಸಭೆಯಲ್ಲಿ ಭಾಷಣ ಮಾಡಿದ ಅನಂತಕುಮಾರ್ ಹೆಗಡೆ, ತಮ್ಮ ಭಾಷಣದ ಸಂದರ್ಭದಲ್ಲಿ ಇಂದಿರಾಗಾಂಧಿ ಕುಟುಂಬದ ದುರಂತದ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಗೋಹತ್ಯಾ ನಿಷೇಧ ಹೋರಾಟ ನಡೆಯಿತು. ಆಗ ಅನೇಕ ಗೋವುಗಳನ್ನು ಗುಂಡಿಟ್ಟು ಕೊಂದರು, ಸಂತರನ್ನು ಸಹ ಕೊಲ್ಲಲಾಯಿತು. ಇದೆಲ್ಲವೂ ಇಂದಿರಾ ಕಣ್ಮುಂದೆ ನಡೆಯಿತು. ಆ ಸಂದರ್ಭದಲ್ಲಿ ಸಂತರು ನಿಮ್ಮ ಇಡಿ ಕುಟುಂಬ ಗೋಪಾಷ್ಠಮಿ ದಿನ ಅಂತ್ಯವಾಗಲೆಂದು ಶಾಪ ನೀಡಿದರು. ಇದರ ಪರಿಣಾಮ ಇಂದಿರಾ ಗಾಂಧಿ ಅವರು ಗೋಪಾಷ್ಠಮಿ ದಿನದಂದು ಹತ್ಯೆಯಾದರು. ಸಂಜಯ್ ಗಾಂಧಿ ಸಹ ಗೋಪಾಷ್ಠಮಿ ದಿನ ಏರ್ ಕ್ವಾಶ್ ನಲ್ಲಿ ಮೃತರಾದರು. ಇನ್ನು ರಾಜೀವ್ ಗಾಂಧಿ ಬಾಂಬ್ ಬ್ಲಾಷ್ಟ್ ನಲ್ಲಿ ಸತ್ತಿದ್ದು ಗೋಪಾಷ್ಠಮಿ ದಿನದಂದೆ. ಅವರಿಗೆ ಸಂತರು ಶಾಪ ನೀಡಿದ್ದರು, ಸಂತರನ್ನು ಕೊಂದರು ನಾವು ಸಹಿಸಿಕೊಳ್ಳುತ್ತೇವೆ. ಆದರೆ ಗೋವುಗಳನ್ನು ಕೊಂದರೆ ನಾವು ಕ್ಷಮಿಸಲ್ಲ ಎಂದು ಸಂತರು ಹೇಳಿದ್ದರು. ಹೀಗಾಗಿ ಗೋಪಾಷ್ಠಮಿ ದಿನವೇ ನಿಮ್ಮ ಕುಟುಂಬ ಅಂತ್ಯವಾಗಲಿ ಎಂದು ಶಾಪ ನೀಡಿದ್ದರು.
ಈ ನಡುವೆ ತಮ್ಮ ಭಾಷಣದ ವೇಳೆ ಗಾಂಧಿ ಕುಟುಂಬದವರ ದುರಂತ ಅಂತ್ಯದ ವಿಚಾರವಾಗಿ ಮಾತನಾಡುತ್ತಿದ್ದ ಅನಂತ್ ಕುಮಾರ್ ಹೆಗಡೆ, ಭಾಷಣದ ಮಧ್ಯೆ, ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್‌ಗಾಂಧಿ ಎಂದು ಹೇಳಿದರು.