ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ‘ತಾಯಂದಿರು ದಾರಿ ತಪ್ತಿದ್ದಾರೆ’ ಎಂದಿದ್ದರು. ಆ ಬಳಿಕ ಕ್ಷಮಾಪಣೆಯನ್ನೂ ಕೇಳಿದ್ದರು. ಆ ಬಳಿಕವೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದ್ದು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕಾರ್ಯಕ್ರಮಕ್ಕೆ ನುಗ್ಗಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿನ ಕುಂಚಿಟಿಗರ ಸಭಾಭವನದಲ್ಲಿ ನಡೆಯುತ್ತಿದ್ದ ಮೈತ್ರಿ ಸಮಾವೇಶದಲ್ಲಿ ಇಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಗದ್ದಲ ಎಬ್ಬಿಸಿದ್ದಾರೆ.

ಮಹಿಳಾ ಕಾರ್ಯಕರ್ತೆಯರು ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಕುಂಚಿಟಿಗ ಭವನದ ವೇದಿಕೆ ಮುಂಭಾಗದಿಂದ ಗೇಟ್‌ವರೆಗೂ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಕುಂಚಿಟಿಗ ಭವನದಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ ದೇವೆಗೌಡರ ಜೊತೆಗೆ ಪೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಹತ್ತಿರಕ್ಕೆ ಬಂದು ಕುಮಾರಸ್ವಾಮಿ ಹಾಗೂ ದೇವೆಗೌಡರ ವಿರುದ್ಧ ಧಿಕ್ಕಾರದ ಕೂಗಿ ಘೋಷಣೆ ಕೂಗಿದ್ದಾರೆ. ಕೂಡಲೇ ಇಬ್ಬರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರನ್ನ ವಶಕ್ಕೆ ಪಡೆದಿದ್ದಾರೆ ಪೊಲೀಸರು.

ಮೈತ್ರಿ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಧಿಕ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಮಾತನಾಡಿದ್ದು, ಗಲಾಟೆ ಅಲ್ಲ ರೀ ಹತಾಶಾರಾಗಿದ್ದಾರೆ. ದೇವೆಗೌಡರು ಸಮುದ್ರ ರೀ. ಈ ಸಣ್ಣಪುಟ್ಟದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳಲ್ಲ. ದೇಶ ಕಂಡ ಅಪರೂಪದ ರೈತ ನಾಯಕ ಅವರು. ಇದಕ್ಕೆ ಬೆಳಗ್ಗೆನೇ ಕುಮಾರಸ್ವಾಮಿ ಕ್ಲಾರಿಟಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರಿಗೆ ಏನಾದ್ರು ಒಂದು ನ್ಯೂಸ್ ಸೆನ್ಸ್ ಆಗಲಿ ಅನ್ನೋ ಬಯಕೆ ಎಂದಿದ್ದಾರೆ. ಇನ್ನು ಹತಾಶಾ ಭಾವನೆಯಿಂದ ಮಾಡಿರುವ ಸ್ವಯಂಕೃತ ಅಪರಾಧ. ಭಯ ಅಂತ ನಾನು ಹೇಳಲ್ಲ, ಹತಾಶಾರಾಗಿದ್ದಾರೆ. ಪೊಲೀಸ್ ಭದ್ರತಾ ವೈಫಲ್ಯ ಅಂತ ಹೇಳೋಕೆ ನಾನು ತಯಾರಿಲ್ಲ. ನಮ್ಮ ಕಾರ್ಯಕ್ರಮ ಸಕ್ಸಸ್ ಆಗ್ತಿರೋದಕ್ಕೆ ಈ ರೀತಿಯಾಗಿ ಮಾಡಿದ್ದಾರೆ ಎಂದಿದ್ದಾರೆ.

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಇವತ್ತು ಬಿಜೆಪಿ- ಜೆಡಿಎಸ್ ಸಭೆಯಲ್ಲಿ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ಹಾಜರಿದ್ದರು. ಅವರು ಮಾತನಾಡುವಾಗ ಇಬ್ಬರು ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯರು, ಒಂದು ರೀತಿ ಮಫ್ತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತೆಯರ ರೀತಿ ಬಂದಿದ್ದರು. ದೇವೇಗೌಡರನ್ನ ಏನು ಮಾಡೋಕೆ ಬಂದಿದ್ದರೋ ಗೊತ್ತಿಲ್ಲ. ಘೋಷಣೆ ಕೂಗಿಕೊಂಡು ಒಳಗೆ ಬರೋದಕ್ಕೆ ಹೋದ್ರು. ಇದು ಖಂಡನಾರ್ಹ. ತುಮಕೂರಿನಲ್ಲಿ ಈ ರೀತಿಯಾದ ಯಾವುದೇ ಘಟನೆ ನೋಡಿರಲಿಲ್ಲ. ಯಾವುದೇ ವಿರೋಧ ಪಕ್ಷವಾದರೂ ಗೌರವಯುತವಾಗಿ ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಬೇಕಿತ್ತು ಎಂದಿದ್ದಾರೆ.
ಕಾಂಗ್ರೆಸ್‌ನವರಿಗೆ ತಾಕತ್ತಿದ್ರೆ ನೇರವಾಗಿ ಚುನಾವಣೆ ಮಾಡಬೇಕು. ಇಲ್ಲಿ ಶಿಖಂಡಿ ಥರ ಕಳುಹಿಸಿ ಕಾರ್ಯಕ್ರಮದಲ್ಲಿ ಗದ್ದಲ ಮಾಡೋದಲ್ಲ, ನೇರವಾಗಿ ಬರಬೇಕಿತ್ತು. ಹಿಂದೆ ನಿಂತ್ಕೊಂಡು ಯಾರನ್ನೋ ಕಳುಹಿಸೋದಲ್ಲ. ದೇವೇಗೌಡರ ಮೇಲೆ ಏನಾದ್ರು ನಡೆದಿದ್ರೆ ಏನು ಆಗ್ತಿತ್ತು. ನಾವು ಇದನ್ನ ಎಸ್‌ಪಿಯವರಿಗೆ ಹೇಳಿ, ನಾವೆಲ್ಲಾ ಖಂಡಿಸುತ್ತೇವೆ. ನಾವು ಮುಂಚೆನೇ ಎಸ್‌ಪಿಯವರಿಗೆ ಹೇಳಿದ್ವಿ, ಈ ಥರ ಏನಾದ್ರೂ ಆಗುತ್ತೆ ಅಂತ. ಈ ರೀತಿ ಮಾಡೋದು ಕಾಂಗ್ರೆಸ್ ನಾಯಕರಿಗೆ ಶೋಭೆ ತರಲ್ಲ. ಅವರಾಗಿ ಅವರು ಬರಲ್ಲ, ಅವರಿಗೆ ಧೈರ್ಯ ಇರಲ್ಲ. ಅವರಿಗೆ ಯಾರಾದ್ರೂ ಚಿತಾವಣೆ ಮಾಡಿ ಕಳುಹಿಸಿರ್ತಾರೆ ಎಂದು ಜ್ಯೋತಿ ಗಣೇಶ್ ಟೀಕಿಸಿದ್ದಾರೆ
ಕೃಷ್ಣಮಣಿ
,